ಮಂಗಳೂರು ವಿ.ವಿ. ಚೆಸ್ ಚಾಂಪಿಯನ್ ಶಿಪ್: ರಥಬೀದಿ ಕಾಲೇಜಿನ ಮಹಿಳಾ ತಂಡ ಪ್ರಥಮ

ಮಂಗಳೂರು ವಿ.ವಿ. ಚೆಸ್ ಚಾಂಪಿಯನ್ ಶಿಪ್: ರಥಬೀದಿ ಕಾಲೇಜಿನ ಮಹಿಳಾ ತಂಡ ಪ್ರಥಮ


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ‌ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ತಂಡ ಪ್ರಥಮ‌ ಸ್ಥಾನ ಪಡೆದುಕೊಂಡಿದೆ.


ವಿವೇಕಾನಂದ ಕಾಲೇಜ್ ( ಸ್ವಾಯತ್ತ ) ಪುತ್ತೂರು ದ್ವಿತೀಯ, ಎಸ್‌ಡಿಎಂ ಕಾಲೇಜ್ (ಸ್ವಾಯತ್ತ) ಉಜಿರೆ ತೃತೀಯ ಹಾಗೂ ಡಾ. ಬಿ.ಬಿ. ಹೆಗ್ಡೆ ಪ್ರ.ದ. ಕಾಲೇಜ್ ಕುಂದಾಪುರ ಚತುರ್ಥ ಸ್ಥಾನ ಗಳಿಸಿತು. 


ಪುರುಷರ ವಿಭಾಗದಲ್ಲಿ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರ.ದ. ಕಾಲೇಜ್ ಪ್ರಥಮ ಸ್ಥಾನ, ವಿವೇಕಾನಂದ ಕಾಲೇಜ್ (ಸ್ವಾಯತ್ತ) ಪುತ್ತೂರು ದ್ವಿತೀಯ, ಭಂಡಾರ್‌ಕಾರ್ಸ್‌ ಕಾಲೇಜ್ ಕುಂದಾಪುರ ತೃತೀಯ ಹಾಗೂ ಶ್ರೀ ಪೂರ್ಣಪ್ರಜ್ಞ ಕಾಲೇಜ್ ಉಡುಪಿ ಚತುರ್ಥ ಸ್ಥಾನ ಗಳಿಸಿತು.


ಪಂದ್ಯಾಟದಲ್ಲಿ 67 ಕಾಲೇಜುಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article