ರೆಡ್‌ಕ್ರಾಸ್ ಕೇವಲ ಬ್ಯಾಡ್ಜ್ ಅಥವಾ ಪ್ರಮಾಣ ಪತ್ರವಲ್ಲ ಸೇವೆ: ದೀಕ್ಷಿತಾ ಟಿ.ಎಸ್.

ರೆಡ್‌ಕ್ರಾಸ್ ಕೇವಲ ಬ್ಯಾಡ್ಜ್ ಅಥವಾ ಪ್ರಮಾಣ ಪತ್ರವಲ್ಲ ಸೇವೆ: ದೀಕ್ಷಿತಾ ಟಿ.ಎಸ್.


ಮಂಗಳೂರು: ಯುವ ರೆಡ್‌ಕ್ರಾಸ್ ಒಂದು ಮಾನವೀಯ ಸಂಸ್ಥೆಯಾಗಿದ್ದು, ಇದು ಜನರ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ಸಂಸ್ಥೆಯಾಗಿದೆ ಎಂದು ಬೆಸೆಂಟ್  ಮಹಿಳಾ ಕಾಲೇಜಿನ ಯುವ ರೆಡ್‌ಕ್ರಾಸ್ ಅಧಿಕಾರಿ ದೀಕ್ಷಿತಾ ಟಿ.ಎಸ್. ಹೇಳಿದರು. 

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಹಾಗೂ ಸಂಸ್ಥೆಯ ನಾವೀನ್ಯತಾ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಯುವ ರೆಡ್ ಸ್ ಪುನಃಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೆಡ್‌ಕ್ರಾಸ್ ಸಂಸ್ಥೆ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಯುವಜನರಲ್ಲಿ ಧೈರ್ಯ ತುಂಬುತ್ತದೆ. ಏಕತೆ, ಮಾನವೀಯತೆ, ನಾಯಕತ್ವ ಗುಣ ಬೆಳೆಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಪ್ರೇರೇಪಣೆ ನೀಡುತ್ತದೆ. ರೆಡ್‌ಕ್ರಾಸ್ ಕಾರ್ಯಕರ್ತರು ಎಂದಿಗೂ ಸೇವೆ ಮಾಡಲು ಸಿದ್ಧರಿರಬೇಕು ಹಾಗೂ ತಂಡವಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ವಿದ್ಯಾರ್ಥಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ. ಆ ಮೂಲಕ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಲು ಮುಂದಾಗಬೇಕಿದೆ ಎಂದು ಹೇಳಿದರು.

ಯುವ ರೆಡ್‌ಕ್ರಾಸ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಒಂದು ಅಂಗವಾಗಿದೆ. ಇದೊಂದು ಸೇವಾ ಪ್ರಧಾನ ಸಂಸ್ಥೆಯಾಗಿದ್ದು, ಎಲ್ಲೆಡೆ ವ್ಯಾಪಕವಾಗಿ ಮಾನವೀಯತೆ ಹರಡುತ್ತಿರುವ ಒಂದು ವಿಶಾಲವಾದ ಸಂಘಟನೆಯಾಗಿದೆ. ಇದರ ಮುಖ್ಯ ಉದ್ದೇಶವೇ ಸೇವೆ ಮಾಡುವುದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಹಾಗೂ ಐಐಸಿ ಅಧ್ಯಕ್ಷೆ ಡಾ. ಭಾರತಿ ಪಿಲಾರ್, ಐಐಸಿ ಸಂಯೋಜಕ ಡಾ. ವೀರಭದ್ರಪ್ಪ ಸೇರಿದಂತೆ ಯುವ ರೆಡ್‌ಕ್ರಾಸ್‌ನ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಅನಿಕೇತ್ ಎಸ್. ಭಟ್, ನೆಬೀಸಾ ಹೈಫಾ, ಧನ್ವಿತ್ ಶೆಟ್ಟಿ, ಆಯಿಷಾ ಭಾನು ಹಾಗೂ ಧೃತಿ ಧೀರಜ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article