ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ಗಿನ್ನಿಸ್ ದಾಖಲೆ: ಸತೀಶ್ ಕುಂಪಲ

ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ಗಿನ್ನಿಸ್ ದಾಖಲೆ: ಸತೀಶ್ ಕುಂಪಲ

ಮಂಗಳೂರು: ಬಂಟ್ವಾಳದಲ್ಲಿ ನಡೆದಿದ್ದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಭರತ್ ಕುಮ್ಡೇಲು ಸೇರಿದಂತೆ ೮ ಮಂದಿಗೆ ನ್ಯಾಯಾಲಯವು ಜಾಮೀನು ನೀಡಿ ಆದೇಶ ಹೊರಡಿಸಿದೆ. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ತರಾತುರಿಯಲ್ಲಿ ಭರತ್ ಜತೆಯಲ್ಲಿ ಇತರರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ ಮತ್ತೆ ಸೆರೆಮನೆಗೆ ತಳ್ಳುವ ಕೆಲಸ ಮಾಡಿದೆ. ಓಲೈಕೆ ರಾಜಕಾರಣಕ್ಕಾಗಿ ಕಾನೂನಿನ ದುರ್ಬಳಕೆಯನ್ನು ಆಡಳಿತರೂಢ ಕಾಂಗ್ರೆಸ್ ನಡೆಸುತ್ತಿದೆ ಎಂದು ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಒಂದು ವರ್ಗದ ಗಲಭೆಕೋರರ ಮೇಲಿನ ಕೇಸುಗಳನ್ನು ವಾಪಸ್ ಪಡೆಯುತ್ತಿದೆ. ಹಿಂದೂ ಯುವಕರ ಮೇಲೆ ಗಡೀಪಾರು, ಗೂಂಡ ಕಾಯ್ದೆ, ಹಿಂದೂ ನಾಯಕರು, ಬಿ.ಜೆ.ಪಿ. ಶಾಸಕರುಗಳ ಮೇಲೆ ವಿನಾ ಕಾರಣ ಕೇಸುಗಳನ್ನು ದಾಖಲಿಸುವುದು. ಪಾಕಿಸ್ತಾನ ಜಿಂದಾಬಾದ್ ಹೇಳಿದವರ ಮೇಲೆ ಮೃದುದೋರಣೆ, ದೇಶದ್ರೋಹಿಗಳಿಗೆ ರಾಷ್ಟ್ರೀವಾದಿ ಪಟ್ಟ ನೀಡುವುದು ಒಟ್ಟಾರೆಯಾಗಿ ಮುಸ್ಲಿಮರ ತಾಳಕ್ಕೆ ತಕ್ಕಂತೆ ಸರ್ಕಾರ ಕುಣಿಯುತ್ತಿದೆ. ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ಗಿನ್ನೆಸ್ ದಾಖಲೆ ಮಾಡಲು ಹೊರಟಿದೆ. ಹಿಂದುಗಳ ಮೇಲಿನ ದಬ್ಬಾಳಿಕೆಯನ್ನು ತಕ್ಷಣ ಕೈಬಿಡಬೇಕು. ಹಿಂದು ಯುವಕರ ಮೇಲೆ ಹಾಕಿರುವ ಗೂಂಡಾ ಕಾಯ್ದೆಯನ್ನು ತೆರವುಗೊಳಿಸಬೇಕೆಂದು ಕುಂಪಲ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article