ಹಣ್ಣಿನಂಗಡಿಯೊಳಗೆ ನುಗ್ಗಿದ ಬಲೆನೋ ಕಾರು
Sunday, September 20, 2026
ಮೂಡುಬಿದಿರೆ: ಇಲ್ಲಿನ ಸತ್ಯನಾರಾಯಣ ದೇವಸ್ಥಾನದ ಬಳಿ ಇರುವ ಹಣ್ಣಿನಂಗಡಿಗೆ ಬಲೆನೋ ಕಾರೊಂದು ಪಲ್ಟಿ ಹೊಡೆದು ಅಂಗಡಿಗೆ ನುಗ್ಗಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಜ್ಯೋತಿ ನಗರ ಕಡೆಯಿಂದ ಬರುತ್ತಿದ್ದ ಕಾರು ಹಣ್ಣಿನಂಗಡಿ ಬಳಿ ನಿಂತಿದ್ದ ಮಾರುತಿ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಇನ್ನೊಂದು ಕಾರಿಗೆ ಗುದ್ದಿ ಪಲ್ಟಿ ಹೊಡೆದು ಹಣ್ಣಿನಂಗಡಿ ಮೇಲೆ ಎರಗಿದೆ.
ಯಾರಿಗೂ ಅಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಕಾರನ್ನು ಎತ್ತಿ ನಿಲ್ಲಿಸಿದ್ದಾರೆ.
