ಅ.1ರಂದು ಶ್ರೀ ಧವಲಾ ಕಾಲೇಜಿನಲ್ಲಿ 'ತುಳುವ ಐಸಿರಿ-2026'

ಅ.1ರಂದು ಶ್ರೀ ಧವಲಾ ಕಾಲೇಜಿನಲ್ಲಿ 'ತುಳುವ ಐಸಿರಿ-2026'

ಮೂಡುಬಿದಿರೆ: ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ಧವಲಾ ಮಹಾ ವಿದ್ಯಾಲಯ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ತುಳು ವಿಚಾರಗೋಷ್ಠಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಸ್ಪಧಾ೯  ಕಾಯ೯ಕ್ರಮ 'ತುಳುವ ಐಸಿರಿ -2026' ಅ. 1ರಂದು  ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 

ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರು ಕಾಯ೯ಕ್ರಮವನ್ನು ಬೆಳಿಗ್ಗೆ 10.00 ಗಂಟೆಗೆ ಉದ್ಘಾಟಿಸಲಿದ್ದಾರೆ. ಡಿಜೆವಿ ಸಂಘದ ಸಂಚಾಲಕ ಕೆ. ಹೇಮರಾಜ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರ್ 'ಆಡಳಿತ ಭಾಷೆಯಾಗಿ ತುಳು-ಹೊಸ ಸಾಧ್ಯತೆಗಳು' ಎಂಬ ವಿಷಯವಾಗಿ ತುಳು ಉಪನ್ಯಾಸ ನೀಡಲಿದ್ದಾರೆ.

ನಾಟಿ ವೈದ್ಯೆ ಕಾಕ೯ಳ ಕಿನ್ನಿಮುಂಡೇವುನ ಶಾಂತ ಇಂದು ನಾಯ್ಕ್, ದೈವ ನತ೯ಕ ಕರಿಯ ನಲ್ಕೆ ವಾಲ್ಪಾಡಿ ಅವರಿಗೆ ಸನ್ಮಾನ ನಡೆಯಲಿದೆ. 

ಡಿಜೆವಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಪೃಥ್ವಿರಾಜ್ ಶೆಟ್ಟಿ ಮತ್ತು ದಿನೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಡುಮಾನಾ೯ಡು ಗ್ರಾ. ಪಂ. ಮಾಜಿ ಸದಸ್ಯ ರಮೇಶ್ ಶೆಟ್ಟಿ ಗೌರವ ಉಪಸ್ಥಿತರಿರುವರು. 

ಅಪರಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾಲೇಜಿನ ಪ್ರಾಂಶುಪಾಲ ಪ್ರೊ. ಪಾಶ್ವ೯ನಾಥ ಅಜ್ರಿ ಅಧ್ಯಕ್ಷತೆಯಲ್ಲಿ ಕೆ. ಹೇಮರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ.  ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ. ಹರೀಶ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಾಯ೯ಕ್ರಮದ ಸಂಯೋಜಕಿ ಮಲ್ಲಿಕಾ ರಾವ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article