18 ದ್ವಿಚಕ್ರ ವಾಹನಗಳಲ್ಲಿ ಕಳವು
Saturday, September 12, 2026
ಮೂಡುಬಿದಿರೆ: ಗಣೇಶೋತ್ಸವ ಪ್ರಯುಕ್ತ ಮೂಡುಬಿದಿರೆ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಸಂದರ್ಭದಲ್ಲಿ, ಕನ್ನಡ ಭವನದ ಹೊರಗಡೆ ನಿಲ್ಲಿಸಿದ್ದ ಸುಮಾರು 18 ದ್ವಿಚಕ್ರ ವಾಹನಗಳ ಸೀಟು ಹಾಗೂ ಡಿಕ್ಕಿಗಳನ್ನು ತೆರೆದು, ಅವುಗಳಲ್ಲಿದ್ದ ವಸ್ತುಗಳನ್ನು ಕಳವು ಮಾಡಲಾಗಿದೆ.
ಘಟನೆ ಕುರಿತು ಆಯೋಜಕರು ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.