ಶ್ರೀ ಪಂಚಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಮಹಾಸಭೆ-2025-26ನೇ ಸಾಲಿನಲ್ಲಿ 13 ಲಕ್ಷ ಲಾಭಾಂಶ: ರಂಜಿತ್ ಪೂಜಾರಿ
ಮುಖ್ಯ ಕಾರ್ಯನಿರ್ವಣಾಧಿಕಾರಿ ಯು. ರಾಜಶೇಖರ್ ಮಧ್ಯಸ್ಥ ಅವರು ಮಹಾಸಭೆಯ ನೋಟಿಸ್ ನ್ನು ಓದಿ ದಾಖಲಿಸಿ 25-26 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ಮಂಜೂರಾತಿ ಪಡೆದುಕೊಂಡರು.
ನಿರ್ದೇಶಕ ಸುರೇಶ್ ಪೂಜಾರಿ ಅವರು 2024-25 ಸಾಲಿನ ಮಹಾಸಭೆಯ ನಡವಳಿಕೆಯನ್ನು ಓದಿದರು. ಗಣೇಶ್ .ಆರ್. ನಾಯ್ಕ್ ಅವರು 25-26ನೇ ಸಾಲಿನ ಲೆಕ್ಕ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡನೆಯು ಮಂಡಿಸಿದರು. ಬಜೆಟ್ ಕ್ಕಿಂತ ಜಾಸ್ತಿಯಾದ ಖರ್ಚಿಗೆ ಸ್ವಾತಿ ಅವರು ಮಂಡಿಸಿ ಮಂಜೂರಾತಿ ಪಡೆದುಕೊಂಡರು.
ನಿದೇ೯ಶಕ ರಾಜೇಂದ್ರ .ಬಿ ಅವರು ಲಾಭಾಂಶವನ್ನು ವಿಂಗಡನೆ ಮಾಡಿದರು. ಶರತ್ .ಜೆ. ಶೆಟ್ಟಿ ಅವರು 26-27ನೇ ಸಾಲಿನ ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಇವರು ಲೆಕ್ಕ ಪರಿಶೋಧನೆ ಮಂಡಿಸಿದರು.
ರೇಖಾ ಕೋಟ್ಯಾನ್ ಮಾಹಿತಿ ನೀಡಿದರು. ಪ್ರತಿಭಾ ಅವರು ಸ್ವಸಹಾಯ ತಂಡದ 3 ವರ್ಷದ ಲಾಭಾಂಶವನ್ನು ಮಂಡಿಸಿದರು.
ನಿರ್ದೇಶಕರಾದ ರತ್ನಾಕರ ಪೂಜಾರಿ, ರವೀಂದ್ರ ಕಕೇ೯ರಾ, ನಾಗೇಶ್ ನಾಯ್ಕ್, ಮೀನಾಕ್ಷಿ ಎಸ್. ಅಂಚನ್ ಉಪಸ್ಥಿತರಿದ್ದರು. ರಮೇಶ .ಎಸ್. ಶೆಟ್ಟಿ ಸ್ವಾಗತಿಸಿದರು. ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ದೇಶಕಿ ಉಷಾ ಭಂಡಾರಿ ವಂದಿಸಿದರು.
