ಸೆ. 6ರಂದು ಮೂಡುಬಿದಿರೆಯಲ್ಲಿ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ 7ನೇ ಶಾಖೆ ಶುಭಾರಂಭ

ಸೆ. 6ರಂದು ಮೂಡುಬಿದಿರೆಯಲ್ಲಿ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ 7ನೇ ಶಾಖೆ ಶುಭಾರಂಭ


ಮೂಡುಬಿದಿರೆ: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಇದರ 7ನೇ ಶಾಖೆಯು  ಸರಕಾರಿ ಆಸ್ಪತ್ರೆ ರಸ್ತೆ ಬಳಿಯ ಪ್ರಭು ಕಾಂಪ್ಲೆಕ್ಸ್  1ನೇ ಮಹಡಿಯಲ್ಲಿ ಸೆ. 6ರಂದು ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ ಎಂದು ಶಾಖೆಯ ಮುಖ್ಯ ಕಾಯ೯ ನಿವ೯ಹಣಾಧಿಕಾರಿ  ಚಂದನ್ ಕೋಟೆಕಾರ್ ತಿಳಿಸಿದ್ದಾರೆ. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕನಾ೯ಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾಯ೯ದಶಿ೯ ಮಿಥುನ್ ಎಂ. ರೈ, ಮೂಡುಬಿದಿರೆ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಪ್ರೇಮಾನಂದ ಕೆ. ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಮಾಜಿ ಸಚಿವ, ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರಿ ಸಂಘ(ನಿ)ದ ಅಧ್ಯಕ್ಷ ಕೃಷ್ಣ ಜೆ. ಪಾಲೇಮಾರ್ ಅವರು ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

 ಸಂಘದ ಉಪಾಧ್ಯಕ್ಷ ಕೆ. ದಿನೇಶ್ ರಾವ್, ಶಾಖಾ ಪ್ರಬಂಧಕಿ ಚಂದ್ರಿಕಾ, ಆಡಳಿತ ಮಂಡಳಿ ನಿದೇ೯ಶಕರುಗಳು ಭಾಗವಹಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article