ಸೆ.9ರಂದು ಮೂಡುಬಿದಿರೆಯಲ್ಲಿ ಕುರಲ್ ಕಲಾವಿದೆರ್ ಬೆದ್ರ ತಂಡದ ನೂತನ ನಾಟಕ 'ಅಪ್ಪೆ' ಉಚಿತ ಪ್ರದಶ೯ನ

ಸೆ.9ರಂದು ಮೂಡುಬಿದಿರೆಯಲ್ಲಿ ಕುರಲ್ ಕಲಾವಿದೆರ್ ಬೆದ್ರ ತಂಡದ ನೂತನ ನಾಟಕ 'ಅಪ್ಪೆ' ಉಚಿತ ಪ್ರದಶ೯ನ


ಮೂಡುಬಿದಿರೆ: ಕುರಲ್ ಕಲಾವಿದೆರ್ ಬೆದ್ರ ತಂಡದ   ಈ ವರ್ಷದ  ಭಕ್ತಿಪ್ರಧಾನವಾದ ನಾಟಕ ‘ ಅಪ್ಪೆ’ ಸೆ. 9ರಂದು ಸಂಜೆ 7-30 ಕ್ಕೆ ಮೂಡುಬಿದಿರೆಯ ಕನ್ನಡ ಭವನದಲ್ಲಿ  ನಾಟಕದ ಮೊದಲ ಪ್ರದರ್ಶನ  ನಡೆಯಲಿದೆ ಎಂದು ತಂಡದ ಸಮಗ್ರ ನಿರ್ವಾಹಕಿ ಬಾಲಿಕಾ ಪ್ರಸಾದ್ ಪಡುಕೊಣಾಜೆ ತಿಳಿಸಿದ್ದಾರೆ. 

ಅವರು ಮಂಗಳವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಸಾದ್ ಆಳ್ವ ಪಡುಕೊಣಾಜೆ ಅವರ ಸಾರಥ್ಯದ ಕುರಲ್ ತಂಡವು ‘ಯೇರ್’ ಹಾಗೂ ‘ತೀರ್ಥ’ ಎಂಬ ಎರಡು ಯಶಸ್ವೀ ನಾಟಕಗಳನ್ನು ಕಲಾ ಪ್ರೇಕ್ಷರಿಗೆ ನೀಡಿದ್ದು ಇದೀಗ ಭಕ್ತಿ ಪ್ರಧಾನವಾದ ಹೊಸ ನಾಟಕವನ್ನು  ರಂಗಭೂಮಿಗೆ ನೀಡಲಿದೆ ಎಂದ ಅವರು ಪ್ರತಿಭಾವಂತ ಕಲಾವಿದರಿರುವ ನಮ್ಮ ತಂಡಕ್ಕೆ ಈ ವರ್ಷ ಯೋಗೀಶ್ ಪೂಜಾರಿ ಪೇರಲ್ಕೆ ಅವರು ನಾಟಕ ರಚಿಸಿ, ನಿರ್ದೇಶಿಸಿ,ನಟಿಸಲಿದ್ದಾರೆ ಎಂದರು.

ನಿರ್ದೇಶಕ ಯೋಗೀಶ್ ಪೂಜಾರಿ ಪೇರಲ್ಕೆ ಅವರು ಮಾತನಾಡಿ ‘ತುಳುನಾಡಿನ ಜನರ ನಂಬಿಕೆಯ ಹಾಗೂ ಕಾರಣಿಕದ ತಾಯಿಯಾಗಿರುವ ಮಂತ್ರದೇವತೆಯ ಬಗ್ಗೆ ಒಂದು ನೈಜ ಕಥೆಯಾಧಾರಿತವಾಗಿ ಈ ನಾಟಕವನ್ನು ರಚಿಸಿದ್ದೇನೆ,ಇದು ಪೌರಾಣಿಕ ನಾಟಕವಲ್ಲ, ಸಾಮಾಜಿಕ ನಾಟಕವಾಗಿದ್ದು ಭಿನ್ನ ಸೆಟ್ಟಿಂಗ್ ಹಾಗೂ ದೃಶ್ಯಗಳ ಮೂಲಕ ನಾಟಕವು ಜನಮೆಚ್ಚುಗೆ ಪಡೆಯಲಿದೆ’ ಎಂದು ಹೇಳಿದರು.

ನಾಟಕಕ್ಕೆ ಸಾಹಿತ್ಯ ಒದಗಿಸಿದ ಚೇತನ್ ಕಾಶಿಪಟ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article