ವಾರೆಂಟ್ ಜಾರಿ: ಆರೋಪಿ ಬಂಧನ

ವಾರೆಂಟ್ ಜಾರಿ: ಆರೋಪಿ ಬಂಧನ

ಮೂಡುಬಿದಿರೆ: ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಆರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೂಡುಬಿದಿರೆ ಪೊಲೀಸ್ ಠಾಣೆಯ ವಾರೆಂಟ್ ಜಾರಿ ಕರ್ತವ್ಯದ ಹೆಚ್.ಸಿ. ರವೀಂದ್ರ, ಪಿ.ಸಿ. ಲಿಂಗೇಶ್ ಹಾಗೂ ಕೋರ್ಟ್ ಪಿ.ಸಿ. ರಮೇಶ್ ಕಾರ್ಯಾಚರಣೆ ನಡೆಸಿ ಅಬೂಬಕ್ಕರ್  ಯಾನೆ ಅಬ್ದುಲ್ ಖಾದರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ ಎಂಬ ಆರೋಪಿಯನ್ನು ಆ.28ರಂದು ಬಂಧಿಸಿದ್ದಾರೆ.

ಆರೋಪಿಯನ್ನು ಮೂಡುಬಿದಿರೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಈತನ ವಿರುದ್ಧ ಕಾರ್ಕಳ ಗ್ರಾಮಾಂತರ, ಶಿರ್ವ, ಮುಲ್ಕಿ, ಬಸವನಹಳ್ಳಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article