ಮೂಡುಬಿದಿರೆಯಲ್ಲಿ ಮೊಸರ ಕುಡಿಕೆಗಳನ್ನು ಒಡೆದ ಇಬ್ಬರು ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿಗಳು

ಮೂಡುಬಿದಿರೆಯಲ್ಲಿ ಮೊಸರ ಕುಡಿಕೆಗಳನ್ನು ಒಡೆದ ಇಬ್ಬರು ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿಗಳು


ಮೂಡುಬಿದಿರೆ: ಇಲ್ಲಿನ  ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಶನಿವಾರ ನಡೆದ 110ನೇ ವಷ೯ದ ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವದಲ್ಲಿ ತೆಂಕುತಿಟ್ಟು ಯಕ್ಷಗಾನೀಯ ಇಬ್ಬರು ಶ್ರೀಕೃಷ್ಣ ವೇಷಧಾರಿಗಳು ಮೂಡುಬಿದಿರೆ ಪೇಟೆಯಲ್ಲಿ ತೂಗು ಹಾಕಲಾಗಿದ್ದ ಮೊಸರ ಕುಡಿಕೆಗಳನ್ನು ಒಡೆಯುವ ಮೂಲಕ ಗಮನ ಸೆಳೆದರು. 

ನೂರ ಹತ್ತು ವರ್ಷಗಳ ಇತಿಹಾಸವಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಯಶೋದಾ-ಕೃಷ್ಣ ಮೂರ್ತಿಯೊಂದಿಗೆ ಮೊಸರು ಕುಡಿಕೆ ಉತ್ಸವದ ಮೆರವಣಿಗೆ ನಡೆಯಿತು. 

ಮೆರವಣಿಗೆಯಲ್ಲಿ ಹುಲಿವೇಷ, ಭಜನೆಯ ಹಲವು ತಂಡಗಳು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು  ಭಾಗವಹಿಸಿ ವಿಶೇಷ ಮೆರುಗು ನೀಡಿದವು.

ವಿವಿಧ ಸಂಘಟನೆಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article