ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಳದ ಮೊಸರು ಕುಡಿಕೆ ಉತ್ಸವ: ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ನಿಂದ ಡಾ. ಜಯಗೋಪಾಲ್ ತೋಳ್ಪಾಡಿಗೆ 'ಶ್ರೀ ಕೃಷ್ಣ' ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ

ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಳದ ಮೊಸರು ಕುಡಿಕೆ ಉತ್ಸವ: ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ನಿಂದ ಡಾ. ಜಯಗೋಪಾಲ್ ತೋಳ್ಪಾಡಿಗೆ 'ಶ್ರೀ ಕೃಷ್ಣ' ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ


ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ  ಶ್ರೀಕೃಷ್ಣಕಟ್ಟೆಯ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ವೇದಿಕೆಯಲ್ಲಿ ಆಯೋಜಿಸಲಾದ 40ನೇ ವರ್ಷದ ಸಾಂಸ್ಕೃತಿಕ ಕಲಾಪದ ಸಭಾ ಕಾಯ೯ಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಡಾ/ಜಯಗೋಪಾಲ ತೋಳ್ಪಾಡಿ ಅವರಿಗೆ 'ಶ್ರೀ ಕೃಷ್ಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು. 


ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವ : ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇರುವೆಲ್ಲು ತಾರಾನಾಥ ಪೂಜಾರಿ, ಗೃಹರಕ್ಷಕದಳದಲ್ಲಿ ಮುಖ್ಯಮಂತ್ರಿಗಳ ಬಂಗಾರದ ಪದಕ ಪುರಸ್ಕೃತ ಪಾಂಡುರಂಗ ಜೈನ್, ಆಳ್ವಾಸ್ ರಂಗ ತರಬೇತುದಾರ ಜೀವನ್‌ರಾಂ ಸುಳ್ಯ, ಜ್ಯೋತಿಷಿ ಡಾ. ಯೋಗಿ ಸುಧಾಕರ ತಂತ್ರಿ, ನಿವೃತ್ತ ಮೆಸ್ಕಾಂ ಅಧಿಕಾರಿ ಪ್ರಕಾಶ್ ಜೆ.,  ಪುರೋಹಿತ ವೇದಮೂರ್ತಿ ಕೆ. ಸುಬ್ರಹ್ಮಣ್ಯ ತಂತ್ರಿ ಏದಾಡಿ, ಯೋಗ ತರಬೇತುದಾರೆ ಪ್ರಫುಲ್ಲ ಶೆಟ್ಟಿ,  ಸಾಹಿತಿ ಸದಾನಂದ ನಾರಾವಿ, ನಟ ಸುರೇಶ್ ಅಂಚನ್,  ದೈವನರ್ತಕ ಮಾರೂರು ಎನ್. ಕೆ. ಸಾಲ್ಯಾನ್, ನಾಗಸ್ವರ ವಾದಕ ಅಣ್ಣಿ ದೇವಾಡಿಗ, ಸಮಾಜ ಸೇವಕರಾದ ಸಚಿನ್ ಭಂಡಾರಿ ಪ್ರಾಂತ್ಯ ಹಾಗೂ ರವಿ ಪೂಜಾರಿ ಒಂಟಿಕಟ್ಟೆ ಹಾಗೂ ಹೊಟೇಲ್ ಉದ್ಯಮಿ ಶ್ರೀಶಾ ಜೈನ್ ಅವರನ್ನು ಸನ್ಮಾನಿಸಲಾಯಿತು.  


ಶ್ರೀಕೃಷ್ಣ ವೇಷಧಾರಿ ಚಂದ್ರಶೇಖರ್ ಮಳಲಿ ಅವರನ್ನು ಪುರಸ್ಕರಿಸಲಾಯಿತು.


ವಿಶೇಷ ಅಭಿನಂದನೆ: 

600ಕ್ಕೆ 600 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಪೂಜಾರಿ ಅವರಿಗೆ ವಿಶೇಷ ಪುರಸ್ಕಾರ ಪ್ರದಾನಿಸಲಾಯಿತು. ಮುದ್ದು ಕೃಷ್ಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:

ಪದವಿ, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕಾಲೇಜು ಹಾಗೂ ಶಾಲೆಗಳ ವಿದ್ಯಾರ್ಥಿಗಳಾದ ಗಗನ್ ರಾವ್, ಸುಹಾಸ್ ರಾವ್, ಧ್ವೈತಿ ರಾವ್, ರಿತಿಕಾ ಎಸ್. ಸಾಲ್ಯಾನ್, ಸೌರಭ್ ರಾವ್, ಶ್ರೇಯಸ್ಕಾ, ತುಷಾರ, ಸೃಷ್ಟಿ ಎಸ್. ಆಚಾರ್ಯ, ಗಗನ್ ನೆಲ್ಲಿತ್ತಿಲ್ಕ, ನವ್ಯಶ್ರೀ, ರಿತೇಶ್ ಭಂಡಾರಿ ಹಾಗೂ ಕೃತಿಲ್ ಅವರನ್ನು ಗೌರವಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯಮಟ್ಟದ ಕುಸ್ತಿಗಾರ ಪಾರ್ಥ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಗ್ಗಜಗ್ಗಾಟ ತರಬೇತುದಾರ ಸುದೀಶ್ ಕೋಟ್ಯಾನ್ ಅವರಿಗೂ ಪುರಸ್ಕಾರ ನೀಡಲಾಯಿತು. ಶ್ರೀಕೃಷ್ಣ ರಾಧಾ ಸಂಶೋಧಕ ಶಾಲೆಯ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು. 

ಸಭಾ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್, ಡಾ. ಎಂ. ಮೋಹನ ಆಳ್ವ, ಕೆ. ಅಭಯಚಂದ್ರ ಜೈನ್, ತಾರಾನಾಥ ಪೂಜಾರಿ ಇರುವೈಲ್, ಕೆ. ಶ್ರೀಪತಿ ಭಟ್, ಸುದರ್ಶನ ಎಂ., ಪುರಂದರ ದೇವಾಡಿಗ, ರಂಜಿತ್ ಪೂಜಾರಿ, ಉದ್ಯಮಿಗಳಾದ ಪ್ರಭಾತ್ಚಂದ್ರ, ರಾಜೇಂದ್ರ, ಸಂತೋಷ್ ಕುಮಾರ್, ಸುಹಾನ್ ಕರ್ಕೇರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮ ನಿರ್ವಹಣೆಯನ್ನು ಬಾರ್ಕೂರಿನ ಎಸ್.ಆರ್. ದಾಮೋದರ ಶರ್ಮ ನಡೆಸಿಕೊಟ್ಟರು. ಕ್ರಿಯೇಟರ್ ಫ್ರೆಂಡ್ಸ್ ಸಹಕಾರ ನೀಡಿತು.

ನಾಗಸ್ವರ, ನೃತ್ಯ ವೈಭವ:

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿಲಾಸ ವಿದ್ವಾನ್ ನಾಗೇಶ್ ಬಪ್ಪನಾಡು ಮತ್ತು ಬಳಗದಿಂದ ನಾಗಸ್ವರ ವಾದನ ಕಾರ್ಯಕ್ರಮ ನಡೆಯಿತು. ಬಳಿಕ ಕಲಾ ತಪಸ್ವಿ ನಾಟ್ಯನಿಲಯಂ ಬಿ. ಬಾಲಕೃಷ್ಣ ಮಂಜೇಶ್ವರ ಅವರ ನೃತ್ಯ ತಂಡದಿಂದ ‘ನರ್ತನ ಕೃಷ್ಣ - 2026’ ಶಾಸ್ತ್ರೀಯ ಹಾಗೂ ಜನಪದ ನೃತ್ಯ ವೈಭವ ಪ್ರದರ್ಶನಗೊಂಡಿತು.

ಯಕ್ಷ ಹಾಸ್ಯ ವೈಭವ:

ಕಲಾವಿದ ದಿನೇಶ್ ಕೋಡಪದವು ಅವರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ ನಡೆಯಿತು. ಹಿಮ್ಮೇಳದಲ್ಲಿ ಯಕ್ಷ ಯುವರತ್ನ ದೀರಜ್ ರೈ ಸಂಪಾಜೆ ಭಾಗವತರಾಗಿ, ರೋಹಿತ್ ಉಚ್ಚಿಲ ಚೆಂಡೆಯಲ್ಲಿ ಹಾಗೂ ನಕ್ಕರೆಮೂಲೆ ಗಣೇಶ್ ಭಟ್ ಮದ್ದಳೆಯಲ್ಲಿ ಸಹಕರಿಸಿದರು.

ಮುಮ್ಮೇಳದಲ್ಲಿ ರಂಗ ಸವ್ಯಸಾಚಿ ಪ್ರಫುಲ್ ಕುಮಾರ್ ಗುರುವಾಯನಕೆರೆ, ರಂಗದ ರಾಜ ಸುಂದರ ರೈ ಮಂದಾರ, ಯಕ್ಷ ಮೆಯ್ಯ ದಿನೇಶ್ ರೈ ಕಡಬ, ದಿನೇಶ್ ಶೆಟ್ಟಿಗಾರ್ ಕೋಡಪದವು ಹಾಗೂ ಯಕ್ಷಕನ್ನಿಕೆ ರಾಜೇಶ್ವರಿ ತಮ್ಮ ಕಲಾ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article