ಪಣಪಿಲ: ಕಮಲಾವತಿ ಅಮ್ಮ ಕ್ರೀಡಾಂಗಣ ಉದ್ಘಾಟನೆ

ಪಣಪಿಲ: ಕಮಲಾವತಿ ಅಮ್ಮ ಕ್ರೀಡಾಂಗಣ ಉದ್ಘಾಟನೆ


ಮೂಡುಬಿದಿರೆ: ಜ್ವಾಲಿ ಗೆಳೆಯರ ಬಳಗದ ನೇತೃತ್ವದಲ್ಲಿ ಪಣಪಿಲ ಗ್ರಾಮದ ಬಂಡಾರ್ ತಪ್ಪು ಬಳಿ ನೂತನವಾಗಿ ನಿಮಿ೯ಸಿರುವ 'ಕಮಲಾವತಿ ಅಮ್ಮ' ಕ್ರೀಡಾಂಗಣದ ಉದ್ಘಾಟನೆ ಹಾಗೂ ಕ್ರಿಕೆಟ್ ಪಂದ್ಯಾಟ ಭಾನುವಾರ ನಡೆಯಿತು.


ಪಣಪಿಲ ಅರಮನೆಯ ಶ್ರೀ ವಮ೯ ಶೆಟ್ಟಿ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ದರೆಗುಡ್ಡೆ ಗ್ರಾ. ಪಂಚಾಯತ್ ನ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಶೆಟ್ಟಿ ಬೇಲೊಟ್ಟು, ತುಳಸಿ ಮೂಲ್ಯ, ಮಾಜಿ ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ಮಾಜಿ ಸದಸ್ಯ ಶ್ರೀಧರ್ ಕೋಟ್ಯಾನ್, ಕರಾವಳಿ ಕೇಸರಿ ಸ್ಥಾಪಕಾಧ್ಯಕ್ಷ ಸಮಿತ್ ರಾಜ್, ಕೋಟಿ-ಚೆನ್ನಯ ಯುವಶಕ್ತಿ ಅಳಿಯೂರು ಇದರ ಸ್ಥಾಪಕಾಧ್ಯಕ್ಷ ವಿಶ್ವನಾಥ ಕೋಟ್ಯಾನ್ ಹನ್ನೇರು, ವಕೀಲ ಭರತ್ ರಾಜ್ ಜೈನ್, ಉದ್ಯಮಿ ಹೇಮಾ ಕೆ. ಪೂಜಾರಿ, ಊರ ಹಿರಿಯರು ಉಪಸ್ಥಿತರಿದ್ದರು.

ಜ್ವಾಲಿ ಗೆಳೆಯರ ಬಳಗದ ಉದಯ ಕೋಟ್ಯಾನ್ ಸ್ವಾಗತಿಸಿದರು. ಅಧ್ಯಕ್ಷ ಪ್ರಸನ್ನ ಕೋಟ್ಯಾನ್ ಕಾಯ೯ಕ್ರಮ ನಿರೂಪಿಸಿದರು. ಅರುಣ್ ಸಾಲ್ಯಾನ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article