ಸಾಮರಸ್ಯದ ಉತ್ಸವ ಮೂಡುಬಿದಿರೆಯ ಗಣೇಶೋತ್ಸವ: ಸಾಧಕರಿಗೆ ಸನ್ಮಾನ

ಸಾಮರಸ್ಯದ ಉತ್ಸವ ಮೂಡುಬಿದಿರೆಯ ಗಣೇಶೋತ್ಸವ: ಸಾಧಕರಿಗೆ ಸನ್ಮಾನ


ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ ನಡೆಯುತ್ತಿರುವ 63ನೇ ವಷ೯ದ ಸಾರ್ವಜನಿಕ ಗಣೇಶೋತ್ಸವದ ಧಾಮಿ೯ಕ ಸಭೆ ಹಾಗೂ ಬಹುಮಾನ ವಿತರಣೆ ಸಮಾರಂಭ ಗುರುವಾರ ಸಂಜೆ ನಡೆಯಿತು. 


ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ (ರಿ.) ಇದರ ಅಧ್ಯಕ್ಷ ನಾರಾಯಣ ಪಿ ಎಂ ಸಭಾಧ್ಯಕ್ಷತೆ ವಹಿಸಿ ಮಾತನಾಡಿ  ಗಣೇಶೋತ್ಸವದಲ್ಲಿ ಸರ್ವಧರ್ಮೀಯರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿ, ತಮ್ಮ ಕೊಡುಗೆಗಳನ್ನು ನೀಡಿರುವ ಮೂಲಕ  ಸಾಮರಸ್ಯದ ಉತ್ಸವವಾಗಿ ಮೂಡಿಬಂದಿದೆ ಎಂದು  ಅಭಿಪ್ರಾಯಪಟ್ಟರು. 


ಸ್ಟಾರ್ಟ್ಅಪ್ ಮೂಲಕ ರಾಷ್ಟ್ರದ ಗಮನ ಸೆಳೆದ 'ಮಾ ವೇದಾಸ್' ಸ್ಥಾಪಕಿ ಮೂಡುಬಿದಿರೆ ಎಸ್ ಕೆ ಎಫ್ ಸಂಸ್ಥೆಯ ಅನುಷಾ ಪ್ರಜ್ವಲ್ ಆಚಾರ್ ಹಾಗೂ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿರುವ  ದಿಶಾ ಪೂಜಾರಿ ಅವರನ್ನು ಶಾಲು ಫಲ ಪುಷ್ಪ ಸ್ಮರಣಿಕೆ ಸನ್ಮಾನದೊಂದಿಗೆ ಗೌರವಿಸಲಾಯಿತು.  

ಉಪನ್ಯಾಸಕ ರಾಮ್ ಪ್ರಸಾದ್ ಕಾಂಚೋಡು ಮಾತನಾಡಿ ಕರಾವಳಿಯಲ್ಲಿ ಗಣೇಶೋತ್ಸವವು ವಿಶೇಷ ಮೆರುಗು, ಸಾಂಸ್ಕೃತಿಕ ಆಯಾಮಗಳನ್ನು ಪಡೆದುಕೊಂಡಿದೆ. ವಿಜೃಂಭಣೆಯ ಹಬ್ಬವಾಗಿರುವ ಇದು ಸಾಮರಸ್ಯದ ಪ್ರತೀಕ, ಬುದ್ಧಿ ಪ್ರಚೋದಕ, ವಿಘ್ನ ನಾಶಕ, ವರದಾಯಕ  ಹಲವು ವೇಷಗಳು, ಮೂಡುಬಿದಿರೆಯ ಪಾಲಿಗೆ ವಿಶೇಷತೆ, ಗಣಪತಿ ಎಲ್ಲವನ್ನು ಒಳಗೊಳ್ಳುವ ತತ್ವ. ಆದರಿಂದ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಮೂಡುಬಿದಿರೆ  ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ, ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಉಪಾಧ್ಯಕ್ಷರಾದ ಕೊರಗ ಶೆಟ್ಟಿ, ದಿವಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜಾರಾಮ್ ನಾಗರಕಟ್ಟೆ ಸ್ವಾಗತಿಸಿದರು. ಹನಿ ಪ್ರಾರ್ಥನೆಗೈದರು. ಹರೀಶ್ ಎಂ ಕೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article