ಮೂಡುಬಿದಿರೆ: ಮೋದಿಜಿಯವರ ಜನ್ಮದಿನದ ಪ್ರಯುಕ್ತ ಗಣಪತಿಗೆ ವಿಶೇಷ ಪೂಜೆ, ಪ್ರಾರ್ಥನೆ
Thursday, September 17, 2026
ಮೂಡುಬಿದಿರೆ: ದೇಶದ ಪ್ರಧಾನಿ ಶ್ರೀ ನರೇಂದ್ರ ದಾಮೋದರದಾಸ್ ಮೋದಿಜಿಯವರ 76ನೇ ಜನ್ಮದಿನಾಚರಣೆಯ ಪ್ರಯುಕ್ತ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾರತೀಯ ಜನತಾ ಪಾರ್ಟಿ ಮುಲ್ಕಿ–ಮೂಡುಬಿದಿರೆ ಮಂಡಲದ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಗುರುವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನಾ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.
ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಮೋದಿಜಿಯವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶಸೇವೆಯ ನಿರಂತರ ಶಕ್ತಿಗಾಗಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಕೆ.ಆರ್ ಪಂಡಿತ್, ಸುದರ್ಶನ್ ಎಂ, ಚೇತನ್ ಕುಮಾರ್ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ಪ್ರಸಾದ್ ಕುಮಾರ್, ರಾಜೇಶ್ ನಾಯಕ್, ಕರುಣಾಕರ್ ಶೆಟ್ಟಿ, ಅಣ್ಣಪ್ಪ ಕೆ ಎಸ್, ಹರೀಶ್ ಎಂ ಕೆ, ಉಮೇಶ್ ಹೆಗಡೆ ,ರಾಜೇಶ್ ಶೆಟ್ಟಿ, ಪ್ರಜ್ವಲ್ ಶೆಣೈ ಉಪಸ್ಥಿತರಿದ್ದು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಮೋದಿಜಿಯವರ ಅಭಿಮಾನಿಗಳು ಭಾಗವಹಿಸಿದ್ದರು.