ಪುತ್ತಿಗೆಯಲ್ಲಿ ಸತ್ಯನಾರಾಯಣ ಪೂಜಾ ಕಟ್ಟೆ ಜೀರ್ಣೋದ್ಧಾರ ಸಮಿತಿ ಮಹಾಸಭೆ

ಪುತ್ತಿಗೆಯಲ್ಲಿ ಸತ್ಯನಾರಾಯಣ ಪೂಜಾ ಕಟ್ಟೆ ಜೀರ್ಣೋದ್ಧಾರ ಸಮಿತಿ ಮಹಾಸಭೆ


ಮೂಡುಬಿದಿರೆ: ಪುತ್ತಿಗೆಯ ಸ್ಥಳೀಯ ಪಳಕಳ ಮಿತ್ರ ಮಂಡಳಿಯ ‘ಮಡಿಲು’ ಸಭಾಂಗಣದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಲಾಲ್ ಅವರು ವೇದಿಕೆಯ ಮೇಲಿದ್ದ ಗಣ್ಯರು ಹಾಗೂ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವೇದಮೂರ್ತಿ ಕೆ. ಅನಂತ ಅಸ್ರಣ್ಣ ಕಾನ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು. ಸತ್ಯನಾರಾಯಣ ಪೂಜಾ ಕಟ್ಟೆಯ ಜೀರ್ಣೋದ್ಧಾರ ಕಾರ್ಯವು ಊರ-ಪರವೂರ ಭಕ್ತಾದಿಗಳ ಒಗ್ಗಟ್ಟಿನಿಂದ ನಿರ್ವಿಘ್ನವಾಗಿ ನೆರವೇರಲಿ ಎಂದು ಅವರು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಮೂಡುಬಿದಿರೆಯ ಪಂಚಶಕ್ತಿ ಎಂಟರ್‌ಪ್ರೈಸಸ್‌ನ ಮಾಲಕರಾದ ರಂಜಿತ್ ಪೂಜಾರಿ ತೋಡಾರ್ ಅವರು ಮಾತನಾಡಿ, ಊರಿನ ಪವಿತ್ರ ಶ್ರದ್ಧಾ ಕೇಂದ್ರದ ಜೀರ್ಣೋದ್ಧಾರ ಕಾರ್ಯ ಸುಸೂತ್ರವಾಗಿ ಪೂರ್ಣಗೊಳ್ಳಲು ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಪ್ರಮುಖರಿಗೆ ಶಾಲು ಹೊದಿಸಿ, ಗುಲಾಬಿ ಪುಷ್ಪ ನೀಡಿ ಅವರ ಜವಾಬ್ದಾರಿ ಸ್ಥಾನಗಳನ್ನು ಘೋಷಿಸಿ ಗೌರವಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ತೇಜಸ್ ಅವರು ಪಳಕಳ ಮಿತ್ರ ಮಂಡಳಿ ಬೆಳೆದು ಬಂದ ಹಾದಿ ಹಾಗೂ ನಡೆಸಿಕೊಂಡು ಬಂದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸೇವಾ ಚಟುವಟಿಕೆಗಳ ಕುರಿತು ಮೆಲುಕು ಹಾಕಿದರು. ಬಳಿಕ ನಡೆದ ಸಮಾಲೋಚನೆಯಲ್ಲಿ ಊರಿನ ಹಿರಿಯರು ಹಾಗೂ ಪ್ರಮುಖರು ಜೀರ್ಣೋದ್ಧಾರದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನು ಹಂಚಿಕೊಂಡರು.

ಸಭೆಯಲ್ಲಿ ರಾಜೇಂದ್ರ ಕುಮಾರ್ ಜೈನ್, ಭರತ್ ಶೆಟ್ಟಿ ಅಂಬೂರಿ, ಉದಯ ದೇವಾಡಿಗ ಕಾನ, ರಾಜೇಶ್ ಮಲ್ಯ, ಪಳಕಳ ಮಿತ್ರ ಮಂಡಳಿ ಅಧ್ಯಕ್ಷ ರವಿಶಂಕರ್ ಭಟ್, ಶಶಿಧರ್ ಎಸ್ ಅಂಚನ್ ಎನಿಕ್ರಿಪಲ್ಲ, ಜಗನ್ನಾಥ್ ಕಾನ ವಕೀಲರು, ಅಶ್ವಿತ್ ಪಳಕಳ, ನಾಗೇಶ್ ಕುಲಾಲ್ ಪಳಕಳ, ಪ್ರಸಾದ್ ಅಂಚನ್ ಪಳಕಳ, ಕೃಷ್ಣಪ್ಪ ಪೂಜಾರಿ ಪಳಕಳ, ಸಚಿನ್ ಪಳಕಳ ಸೇರಿದಂತೆ ಪಳಕಳ ಮಿತ್ರ ಮಂಡಳಿಯ ಸದಸ್ಯರು, ಊರಿನ ಪ್ರಮುಖ ಮುಖಂಡರು, ಮಾತೃಶಕ್ತಿ, ಭಕ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article