ಅಲಂಗಾರ್ ಲಯನ್ಸ್ ಕ್ಲಬ್  ವತಿಯಿಂದ ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇನ್ವರ್ಟರ್‌ ನೆರವು

ಅಲಂಗಾರ್ ಲಯನ್ಸ್ ಕ್ಲಬ್ ವತಿಯಿಂದ ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇನ್ವರ್ಟರ್‌ ನೆರವು


ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷವಾಗಿ ಎಂಡೋಸಲ್ಫಾನ್ ಸಂತ್ರಸ್ತರು ಹಾಗೂ ಇತರ ರೋಗಿಗಳಿಗೆ ಫಿಸಿಯೋಥೆರಪಿ ಚಿಕಿತ್ಸೆಯನ್ನು ನಿರಂತರವಾಗಿ ನೀಡಲು ಇನ್ವರ್ಟರ್‌ನ ಅಗತ್ಯತೆ ಇರುವುದನ್ನು ಕಂಡು ಉದ್ಯಮಿ  ಹರ್ಮನ್ ರೊಡ್ರಿಗಸ್ ಅವರು ನೀಡಿರುವ 2ಕೆವಿಎ ಸಾಮಥ್ಯ೯ದ ಇನ್ವರ್ಟರ್, ಆಸ್ಪತ್ರೆಯ ಫಿಸಿಯೋಥೆರಪಿ ಘಟಕಕ್ಕೆ ಅಲ್ಯೂಮಿನಿಯಂ ಬಾಗಿಲು ಹಾಗೂ ವೆಂಟಿಲೇಷನ್ ಕಿಟಕಿಗಳನ್ನು ಆಲಂಗಾರು ಲಯನ್ಸ್ ಕ್ಲಬ್ ಮೂಲಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಗೆ ಹಸ್ತಾಂತರಿಸಲಾಯಿತು.


ಮೂಡುಬಿದಿರೆ ಕೊಪು೯ಸ್ ಕ್ರಿಸ್ತಿ ಚಚ್೯ ನ ಧರ್ಮ ಗುರು ಓನಿಲ್ ಡಿ'ಸೋಜಾ ಆಶೀವ೯ಚನ ನೀಡಿ ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲಿಯೂ ಫಿಸಿಯೋಥೆರಪಿ ಪಡೆಯುತ್ತಿರುವ ರೋಗಿಗಳಿಗೆ ಚಿಕಿತ್ಸೆಯನ್ನು ನಿರಂತರವಾಗಿ ಮುಂದುವರಿಸಲು ಇನ್ವರ್ಟರ್ ಸಹಕಾರಿಯಾಗಲಿದೆ ಎಂದರು.

ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ರೋಕಿ ಮಸ್ಕೇರೆನ್ಹಸ್,  ಕಾರ್ಯದರ್ಶಿ ಜೆಸಿಂತಾ ಡಿ'ಮೆಲ್ಲೋ, ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚಿನ ಅಂತರಧರ್ಮೀಯ ಆಯೋಗ ಹಾಗೂ ವಿಶೇಷ ಚೇತನರ ಆಯೋಗಗಳ ಸಂಚಾಲಕರು ಭಾಗಿಯಾಗಿದ್ದರು.

ಲ. ಲಾಯ್ಡ್ ರೇಗೊ ಕಾರ್ಯಕ್ರಮ. ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article