ಸೆ.5 ರಂದು ಜವನೆರ್ ಬೆದ್ರ ಫೌಂಡೇಶನ್‌ನಿಂದ ಬೆದ್ರದ ಕೃಷ್ಣೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ "ಅಷ್ಟಮಿದ ಪಿಲಿಗೊಬ್ಬು"
ಮಧ್ಯಾಹ್ನ 1.15ಕ್ಕೆ ‘ಅಷ್ಟಮಿದ ಪಿಲಿಗೊಬ್ಬು’ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿವೇಕ್ ಆಳ್ವ, ಸಂತೋಷ್ ಶೆಟ್ಟಿ ಪೋಳಲಿ, ಪದ್ಮಿ ಕೊಡಿಯಾಲ್ ಬೈಲ್, ಹರ್ಷವರ್ಧನ ಪಡಿವಾಳ್, ನಾಗರಾಜ ಪೂಜಾರಿ, ಪ್ರವೀಣ್ ಶೆಟ್ಟಿ, ರಾಜೇಶ್ ಆಚಾರ್ಯ, ಗಂಗಾಧರ ಶೆಟ್ಟಿ, ಜಾವೇದ್ ಶೇಖ್, ಗುರು ಒಂಟೆಕಟ್ಟೆ, ವಿನಯ್ ಕುಮಾರ್ ಹಾಗೂ ಅಜಿತ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿರುವರು.
ಮಧ್ಯಾಹ್ನ 3 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಉದಯ ಪೂಜಾರಿ, ದರ್ಶನ್ ಜೈನ್, ಮೇಘನಾಥ ಶೆಟ್ಟಿ, ಪ್ರವೀಣ್ ಕುಮಾರ್, ಡಾ. ಶರತ್ ಗೋರೆ, ರವಿ ಪೂಜಾರಿ, ತೇಜಸ್ ಆಚಾರ್ಯ, ಪುರಂದರ ದೇವಾಡಿಗ, ವಿಕಾಸ್ ಜೈನ್ ಪಡ್ಯಾರಬೆಟ್ಟು ಹಾಗೂ ರವಿ ಆಚಾರ್ಯ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ದಿವ್ಯನಿಧಿ ರೈ ಎರುಂಬು ಮತ್ತು ಬಳಗದವರಿಂದ ‘ಸ್ವರ ಸಮರ್ಪಣೆ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 6.35ಕ್ಕೆ ಪಟ್ಲ ಸತೀಶ್ ಶೆಟ್ಟಿ ಹಾಗೂ ರವಿಚಂದ್ರ ಕನ್ನಡಕಟ್ಟೆ ಸಾರಥ್ಯದಲ್ಲಿ ರವೀಂದ್ರ ದೇವಾಡಿಗ, ಸಂದೇಶ್ ಬೇಳ್ಳೂರು ಮತ್ತು ತಂಡದಿಂದ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸಾಯಂಕಾಲ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮ ಹಾಗೂ ಗೌರವ ಸನ್ಮಾನ ಸಮಾರಂಭವನ್ನು ಡಾ. ಎಂ. ಮೋಹನ ಆಳ್ವ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ 2026ನೇ ಸಾಲಿನ ‘ಕೃಷ್ಣೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ರವಿಚಂದ್ರ ಕನ್ನಡಕಟ್ಟೆ, ಜಗನ್ನಾಥ್ ಪ್ರಭು, ಜಗದೀಶ್ ಚಂದ್ರ ಡಿ. ಕೆ. ಹಾಗೂ ಸಂಧ್ಯಾ ಭಟ್ ಅವರಿಗೆ ಗೌರವ ಸನ್ಮಾನ ನೆರವೇರಲಿದೆ.
ನಳಿನ್ ಕುಮಾರ್ ಕಟೀಲ್, ಉಮಾನಾಥ ಕೋಟ್ಯಾನ್, ಮಿಥುನ್ ರೈ, ಕುಲದೀಪ್ ಎಂ., ಶ್ರೀಪತಿ ಭಟ್, ಕೆ. ಪಿ. ಜಗದೀಶ ಅಧಿಕಾರಿ, ಅಜಯ್ ಶೆಟ್ಟಿ, ಶರತ್ ಶೆಟ್ಟಿ, ಸುದರ್ಶನ್ ಎಂ., ಪೂರ್ಣಚಂದ್ರ ಜೈನ್, ಡಾ. ಅಮರಶ್ರೀ ಶೆಟ್ಟಿ, ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಸಂಸ್ಥಾಪಕ ಅಮರ್ ಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯ್ಕ್, ಉಪಾಧ್ಯಕ್ಷ ನಾರಾಯಣ ಪಡುಮಲೆ, ಸಹ ಕಾರ್ಯದರ್ಶಿ ಸಂದೀಪ್ ಕೆಲ್ಲಪುತ್ತಿಗೆ, ಕ್ರೀಡಾ ಸಂಯೋಜಕ ಸುಮಂತ್ ಶೆಟ್ಟಿ ಉಪಸ್ಥಿತರಿದ್ದರು.