'ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ' ಪ್ರಶಸ್ತಿಗೆ ಪೆಂಚಾರು ಶಾಲೆಯ ಶಿಕ್ಷಕಿ ಶ್ರೀವಾಣಿ ಆಯ್ಕೆ

'ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ' ಪ್ರಶಸ್ತಿಗೆ ಪೆಂಚಾರು ಶಾಲೆಯ ಶಿಕ್ಷಕಿ ಶ್ರೀವಾಣಿ ಆಯ್ಕೆ


ಮೂಡುಬಿದಿರೆ: 2026-27 ನೇ ಸಾಲಿನ 'ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ'ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ಮಾಂಟ್ರಾಡಿ ಪೆಂಚಾರು ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಶ್ರೀವಾಣಿ ಅವರು  ಆಯ್ಕೆಯಾಗಿದ್ದಾರೆ.

1996 ರಲ್ಲಿ ಸೇವೆಗೆ ಸೇರಿದ್ದ ಶ್ರೀವಾಣಿಯವರು 13 ವರ್ಷ ವಾಮದಪದವು ಚೆನ್ನೆತ್ತೋಡಿ ಸ‌‌‌.ಮಾ.ಹಿ.ಪ್ರಾ.ಶಾಲೆಯಲ್ಲಿ,4 ವರ್ಷ ಬಂಟ್ವಾಳ ಮಂಡಾಡಿ ಸ.ಕಿ.ಪ್ರಾ.ಶಾಲೆಯಲ್ಲಿ, 8 ವರ್ಷ ಮೂಡುಬಿದಿರೆ ಕೊಡಂಗಲ್ಲು ಶಾಲೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಪೆಂಚಾರು ಶಾಲೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿಯ ಅವಧಿಯಲ್ಲಿ 8 ಬಾರಿ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ 5 ಬಾರಿ ರಾಜ್ಯಮಟ್ಟದ ಬಹುಮಾನವನ್ನು ಪಡೆದಿದ್ದಾರೆ.

ಶಿರ್ತಾಡಿಯ ನಿವಾಸಿಯಾಗಿರುವ ಇವರು ನಿವೃತ್ತ ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಅವರ ಪತ್ನಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article