ಪುತ್ತೂರು ಪೇಟೆಯಲ್ಲಿ ಪ್ರತ್ಯಕ್ಷವಾದ ‘ಕಾಟಿ’ಗಳು..!

ಪುತ್ತೂರು ಪೇಟೆಯಲ್ಲಿ ಪ್ರತ್ಯಕ್ಷವಾದ ‘ಕಾಟಿ’ಗಳು..!


ಪುತ್ತೂರು: ಕಳೆದ ಕೆಲ ಸಮಯದಿಂದ ಪುತ್ತೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಶುಕ್ರವಾರ ಮುಂಜಾನೆ ಇದ್ದಕ್ಕಿದ್ದಂತೆ ಪುತ್ತೂರು ಪೇಟೆಯಲ್ಲಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿವೆ.

ಮುಂಜಾನೆಯ ವೇಳೆ ಪುತ್ತೂರು ಬೈಪಾಸ್ ರಸ್ತೆಯ ದುಗ್ಗಮ್ಮ-ದೇರಣ್ಣ ಸಭಾಭವನದ ಬಳಿಯಲ್ಲಿ ಎರಡು ಕಾಟಿ( ಕಾಡುಕೋಣ)ಗಳು ಕಾಣಿಸಿಕೊಂಡಿವೆ. ಸಾಮಾನ್ಯವಾಗಿ ಪೇಟೆ ಭಾಗದಲ್ಲಿ ಕಾಡುಕೋಣಗಳು ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪವಾಗಿದ್ದು, ಇದಕ್ಕೆ ತದ್ವಿರುದ್ದವಾಗಿ ಕಾಡುಕೋಣಗಳು ಕಾಣಿಸಿಕೊಂಡು ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಿಗೆ ಸ್ವಲ್ಪಮಟ್ಟಿನ ಭೀತಿಗೆ ಕಾರಣವಾಯಿತು.

ಕೆಲ ತಿಂಗಳ ಹಿಂದೆ ಉಪ್ಪಿನಂಗಡಿ ಗ್ರಾಮೀಣ ಪ್ರದೇಶಗಳಲ್ಲಿ ಈ ಕಾಡುಕೋಣಗಳ ಚಲನೆ ಕಂಡುಬಂದಿತ್ತು. ಬಜತ್ತೂರು ಗ್ರಾಮದ ಕೆಲ ಕಡೆಗಳಲ್ಲಿಯೂ ಕಾಡುಕೋಣಗಳ ಚಲನೆ ಕಂಡುಬಂದಿತ್ತು. ಆದರೆ ಈ ಭಾಗದಲ್ಲಿ ಯಾರಿಗೂ ಪ್ರತ್ಯಕ್ಷವಾಗಿ ಕಾಣಲು ಸಿಕ್ಕಿರಲಿಲ್ಲ. ಕಳೆದ ವರ್ಷವೂ ಗೋಳಿತೊಟ್ಟು ಭಾಗದಿಂದ ಬಜತ್ತೂರು ಗ್ರಾಮೀಣ ಪ್ರದೇಶಕ್ಕೆ ಕಾಡುಕೋಣಗಳು ಆಗಮಿಸಿದ್ದವು. ಆದರೆ ಪೇಟೆ ಭಾಗದಲ್ಲಿ ಕಾಡುಕೋಣಗಳು ಪ್ರತ್ಯಕ್ಷಗೊಂಡದ್ದು ಇತ್ತೀಚಿನ ವರ್ಷಗಳಲ್ಲಿ ಪ್ರಥಮಬಾರಿಯಾಗಿದೆ. 

ಅರಣ್ಯಭಾಗದಿಂದ ಆಹಾರ-ನೀರು ಹುಡುಕಾಟದಿಂದಲೂ ಕಾಡುಕೋಣಗಳು ಜನವಸತಿ ಪ್ರದೇಶಗಳಿಗೆ ಬಮದಿರುವ ಸಾಧ್ಯತೆ ಇದೆ. ಬೇಟೆಗಾರರ ಕೈಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಡುಕೋಣಗಳು ಹಾದಿ ತಪ್ಪಿ ಪೇಟೆ ಭಾಗಕ್ಕೆ ಬಂದಿರುವ ಶಂಕೆಯೂ ವ್ಯಕ್ತವಾಗಿದೆ. ತಕ್ಷಣ ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article