ಮೂರು ತಿಂಗಳಿನಿಂದ ಬಿಡುಗಡೆಯಾಗದ ಗೌರವಧನ: ಬಿಸಿಯೂಟ ತಯಾರಿಯ ಅಡುಗೆ ಸಿಬ್ಬಂದಿಗಳು ಕಂಗಾಲು
ಬಂಟ್ವಾಳ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಯ ಅಡುಗೆ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳ ಗೌರವಧನವನ್ನು ಸರಕಾರ ಬಿಡುಗಡೆಯಾಗದರಿಂದ ಕಂಗಾಲಾಗಿದ್ದಾರೆ.
ಇದರ ಪರಿಣಾಮ ಈ ಗೌರವಧನಕ್ಕೆ ಅವಲಂಬಿತರಾಗಿರುವ ಅಡುಗೆ ಸಿಬ್ಬಂದಿಗಳು ತಮ್ಮ ದೈನಂದಿನ ಜೀವನಕ್ಕು ಸಂಕಷ್ಟ ಕ್ಕೊಳಗಾಗುವಂತಾಗಿದೆ. ಈ ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಸರಕಾರ ಶಾಲೆಯಲ್ಲಿನ ಬಿಸಿಯೂಟ ತಯಾರಿಯ ಅಡುಗೆ ಸಿಬ್ಬಂದಿಗಳಿಗೆ ಗೌರವಧನ ಬಿಡುಗಡೆಗೊಳಿಸಿಲ್ಲ ಎಂದು ದೂರಲಾಗಿದೆ. ಈ ಗೌರವಧನವನ್ನು ನಂಬಿ ಅಡುಗೆ ಸಿಬ್ಬಂದಿಗಳು ಈಗಾಗಲೇ ಸಾಲ ಮಾಡಿಕೊಂಡಿದ್ದು, ಇದೀಗ ಗಣೇಶ ಚತುರ್ಥಿ ಸಹಿತ ಸಾಲು, ಸಾಲು ಹಬ್ಬಗಳು ಮುಂದಿದ್ದರೂ, ಸಿಗಬೇಕಾದ ಗೌರವಧನವು ಮೂರ ತಿಂಗಳಿನಿನಿಂದ ಸಿಗದಿರುವುದು ಜೀವನ ಸಾಗಿಸಲು ಕಷ್ಟ ಸಾಧ್ಯವಾಗಿದೆ ಎಂದು ಅವಲತ್ತು ಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅತೀ ಶೀಘ್ರವಾಗಿ ಬಿಸಿಯೂಟ ಅಡುಗೆ ಸಿಬ್ಬಂದಿಗಳ ಗೌರವಧನ ಬಿಡುಗಡೆಗೊಳಿಸುವಂತೆ ಅಡುಗೆ ಸಿಬ್ಬಂದಿಗಳು ಸರಕಾರವನ್ನು ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವರಿಗೆ ಪತ್ರ:
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಯ ಅಡುಗೆ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳ ಗೌರವಧನ ಬಿಡುಗಡೆಯಾಗದಿರುವುದರಿಂದ ಅಡುಗೆ ಸಿಬ್ಬಂದಿಗಳು ಕಂಗಾಲಾಗಿದ್ದಾರೆ.
ಈ ಗೌರವಧನವನ್ನೇ ಅವಲಂಬಿತವಾಗಿರುವ ಅಡುಗೆ ಸಿಬ್ಬಂದಿಗಳಿಗೆ ಜೀವನ ನಡೆಸಲು ಕಷ್ಟಸಾಧ್ಯವಾಗಿದೆ. ಮೂರು ತಿಂಗಳಿನಿಂದ ಗೌರವಧನ ಇಲ್ಲದೆ ಈಗಾಗಲೇ ಸಾಲ ಮಾಡಿರವ ಅಡುಗೆ ಸಿಬ್ಬಂದಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಗಣೇಶ ಚತುರ್ಥಿ ಸಹಿತ ಹಬ್ಬಹರಿದಿನಗಳು ಮುಂದಿದ್ದು, ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಅಡುಗೆ ಸಿಬ್ಬಂದಿಗಳ ಗೌರವಧನ ಬಿಡುಗಡೆ ಮಾಡುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಮೂಲಕ ಒತ್ತಾಯಿಸಿದ್ದಾರೆ. ಪತ್ರದ ಪ್ರತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೂ ರವಾನಿಸಿದ್ದಾರೆ.