ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ
Wednesday, September 30, 2026
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಧ್ಯಾನೇಶ್ ಎಸ್., ರಿಥನ್ ಗೌಡ ಎಸ್.ಪಿ., ಶ್ರೀಶಾಂತ್, ಮೋಹಿತ್ ಬಿ.ಕೆ., ಭುವನ್ ಗೌಡ ಜಿ.ಎನ್., ಡಿ.ವಿ ದೈವಿಕ್ ದರ್ಶನ್, ಪವನ್ ಕುಮಾರ್ ಟಿ., ಲೋಕೇಶ್ ಕೆ.ಜಿ., ತಸ್ಮೈ ಪಿ. ಗೌಡ, ದ್ವಿತೀಯ ಪಿಯುಸಿ ನಿಹಾನ್ ಶೆಟ್ಟಿ ವಿ.ಆರ್., ಉಜ್ವಲ್ ಮನೋಜ್ ತಾರಾ, ಚಿರಾಗ್ ಜಿ.ಯು., ಪವನ್ ವಿ.ವಿ., ಬಿ.ಜಿ ವಿಲಾಸ್, ಗಗನ್ ಸಿ.ಎನ್., ಶ್ರೀಶಾಂತ್ ಎಸ್. ಭಾಗವಹಿಸಿದ್ದರು.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.