ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಸೌಹಾರ್ದ ಸಹಕಾರಿ ಸಂಘ-ಸಿದ್ದಾಪುರದ ಮಹಾಸಭೆ: 105 ಕೋಟಿ ರೂ. ವ್ಯವಹಾರ, 43.85 ಲಕ್ಷ ರೂ ಲಾಭ, ಶೇ.10 ಡಿವಿಡೆಂಟ್ ಘೋಷಣೆ
Tuesday, September 22, 2026
ಸಿದ್ದಾಪುರ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸಿದ್ದಾಪುರದ ಶ್ರೀ ರಂಗನಾಥ ಸಭಾಭವನದಲ್ಲಿ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘವು ಪ್ರಸಕ್ತ ಸಾಲಿನಲ್ಲಿ 105 ಕೋಟಿ ರೂ. ವ್ಯವಹಾರ ನಡೆಸಿ 43.85 ಲಕ್ಷ ಲಾಭ ಗಳಿಸಿರುತ್ತದೆ.
17.72 ಕೋಟಿ ಠೇವಣೆ ಸಂಗ್ರಹಿಸಿ 16.82 ಕೋಟಿ ಸಾಲ ನೀಡಲಾಗಿದೆ. ಹಾಗೂ 2.64 ಕೋಟಿ ರೂ. ನಿಧಿ ಹೊಂದಿದ್ದು ನಾನಾ ಹಣಕಾಸು ಸಂಸ್ಥೆಗಳಲ್ಲಿ 4.52 ಕೋಟಿ ವಿನಿಯೋಗ ಮಾಡಲಾಗಿದೆ. ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಿಸಲಾಯಿತು.
ಹಾಗೆಯೇ ಕುಂದಾಪುರ ವಕೀಲ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಂಸ್ಥೆಯ ನಿರ್ದೇಶಕ ಜೆ. ಶ್ರೀನಾಥ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಬಾಲಚಂದ್ರ ಭಟ್, ಸಿ.ಇ.ಒ. ಸಂಗೀತಾ ಬಿ. ಭಟ್, ನಿರ್ದೇಶಕರಾದ ಮಂಜುನಾಥ ಭಟ್, ಚಂದ್ರಶೇಖರ ಶೆಟ್ಟಿ, ಜೆ. ಶ್ರೀನಾಥ ರಾವ್, ಸತ್ಯನಾರಾಯಣ ಐತಾಳ್, ಕೆ.ಎಸ್. ಯತೀಶ ಯಡಿಯಾಳ್, ಶ್ರೀಕರ ನಾಯಕ್, ಸುರೇಖಾ ಇರಿಗೆ, ಗಿರೀಶ ಬೋವಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಬಾಲಚಂದ್ರ ಭಟ್ ಇವರು ವರದಿ ವಾಚಿಸಿದರು.
ಶಾಖಾ ವ್ಯವಸ್ಥಾಪಕ ಕೆ. ರೋಹಿತ್ ಸ್ವಾಗತಿಸಿ, ಹಿರಿಯ ಗುಮಾಸ್ತ ರಂಜಿತ್ ರಾವ್ ವಂದಿಸಿದರು.