ಕಸ್ತೂರಿರಂಗನ್ ವರದಿ ವಿರುದ್ಧ ಸುಬ್ರಹ್ಮಣ್ಯ, ಬಳ್ಪದಲ್ಲಿ ಬೃಹತ್ ಪ್ರತಿಭಟನೆ, ಸುಮಾರು 1,000 ಮಂದಿ ಭಾಗಿ: ವರದಿ ಕೈಬಿಡುವಂತೆ ಆಗ್ರಹ
ಕೋರ್ಟ್ ಆದೇಶ ಏನೇ ಇದ್ದರೂ ಅಂತಿಮವಾಗಿ ಸರ್ಕಾರದ ಸಚಿವ ಸಂಪುಟದ (ಕ್ಯಾಬಿನೆಟ್) ತೀರ್ಮಾನವೇ ಮುಖ್ಯವಾಗುತ್ತದೆ. ಆದ್ದರಿಂದ ರೈತರಿಗೆ ಮಾರಕವಾಗಬಹುದಾದ ಕಸ್ತೂರಿರಂಗನ್ ವರದಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗಡಿ ಗುರುತು ನಿಗದಿಪಡಿಸುವ ಸಂದರ್ಭದಲ್ಲಿ ಶೂನ್ಯ ಬಫರ್ ಝೋನ್ ನಿಗದಿಪಡಿಸಬೇಕು. ಅಲ್ಲದೆ ಅರ್ಹರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು. ಕಸ್ತೂರಿರಂಗನ್ ವರದಿಯಿಂದ ಸುಮಾರು 100 ಗ್ರಾಮಗಳು ಬಾಧಿತವಾಗುವ ಸಾಧ್ಯತೆ ಇದೆ. ಹೀಗಾಗಿ ವರದಿಯನ್ನು ಕೈಬಿಡುವ ನಿಟ್ಟಿನಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಈಗಾಗಲೇ ಏಳನೇ ಕರಡು ಪ್ರತಿ ಜಾರಿಯಾಗಿದ್ದು, ಎಂಟನೇ ವರದಿ ಸಲ್ಲಿಸುವ ಮುನ್ನವೇ ಜನರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜನರು ಇನ್ನಾದರೂ ಎಚ್ಚೆತ್ತುಕೊಂಡು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕಿಶೋರ್ ಶಿರಾಡಿ ಕರೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ರೈತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
