ಸುಬ್ರಹ್ಮಣ್ಯ ಗ್ರಾ.ಪಂ ಸಭೆ: ಕಸ್ತೂರಿ ರಂಗನ್ ವರದಿ, ಸುಬ್ರಹ್ಮಣ್ಯ ಹಿ.ಪ್ರಾ. ಶಾಲೆ ಬಗ್ಗೆ, ಬಗ್ಗೆ, ಅನಧಿಕೃತ ಅಂಗಡಿ ಬಗ್ಗೆ ಚರ್ಚೆ
Wednesday, September 9, 2026
ಸುಬ್ರಮಣ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆ ಸೆ.9 ರಂದು ರಾಜೀವಗಾಂಧಿ ಸೇವಾ ಕೇಂದ್ರ ದ ಕುಮಾರಧಾರ ಸಭಾಭವನದಲ್ಲಿ ನಡೆಯಿತು.
ಗ್ರಾಮ ಸಭೆಯ ನೊಡೆಲ್ ಅಧಿಕಾರಿಯಾಗಿ ಸುಬ್ರಹ್ಮಣ್ಯ ಗ್ರಾ.ಪಂ ನ ಆಡಳಿತಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕೆಡಿಪಿ ಸದಸ್ಯ ಶಿವರಾಮ ರೈ, ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,ಸದಸ್ಯ ಅಶೋಕ್ ನೆಕ್ರಾಜೆ, ಮೆಸ್ಕಾಂ ನ ಚಿದಾನಂದ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಮಂಜುನಾಥ, ಅರಣ್ಯ ಇಲಾಖೆಯ ಪ್ರಕಾಶ್, ದರ್ಣಪ್ಪ, ಪಶು ಇಲಾಖೆಯ ಮಲ್ಲಿಕಾ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ್, ಶಿಕ್ಷಣ ಇಲಾಖೆಯ ಸುಬ್ರಹ್ಮಣ್ಯ ಕೆ.ಎಸ್, ದೇವಾಲಯದ ಇಂಜಿನಿಯರ್ ಉದಯಕುಮಾರ್, ಯೊಗೀಶ್, ಅರಣ್ಯ ಇಲಾಖೆಯ ಪ್ರಕಾಶ್, ಇಂಜಿನಿಯರ್ ಎಸ್ ಎನ್ ಹುಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಕಸ್ತೂರಿ ರಂಗನ್ ವರದಿ, ಸುಬ್ರಹ್ಮಣ್ಯ ಹಿ.ಪ್ರಾ. ಶಾಲೆ ಕಟ್ಟಡ ಬಗ್ಗೆ, ಸುಬ್ರಹ್ಮಣ್ಯ ಸ್ವಚ್ಚತೆ ಬಗ್ಗೆ , ಮರಳು ಸಮಸ್ಯೆ ಬಗ್ಗೆ, ಕೋವಿ ಲೈಸನ್ಸ್ ಬಗ್ಗೆ, ನದಿಗೆ ತ್ಯಾಜ್ಯ, ಅನಧಿಕೃತ ಅಂಗಡಿ, ಬಹುವಾಗಿ ಚರ್ಚೆ ನಡೆಯಿತು.
