ಕಥೋಲಿಕ್ ಧರ್ಮಾಧ್ಯಕ್ಷರಿಗೆ ಗಣೇಶೋತ್ಸವ ಆಮಂತ್ರಣ

ಕಥೋಲಿಕ್ ಧರ್ಮಾಧ್ಯಕ್ಷರಿಗೆ ಗಣೇಶೋತ್ಸವ ಆಮಂತ್ರಣ


ಮಂಗಳೂರು: ನಗರದ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್  ಆಶ್ರಯದಲ್ಲಿ ನಡೆಯುವ 79ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣವನ್ನು ಮಂಗಳೂರಿನ ಕಥೋಲಿಕ್ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ ಇವರಿಗೆ ಗಣೇಶೋತ್ಸವ ಸಮಿತಿಯ ಪ್ರಮುಖರು ಭೇಟಿಯಾಗಿ ನೀಡಿದರು. 

ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಇಪ್ರಧಾನ ಕಾರ್ಯದರ್ಶಿ  ಗಜಾನನ ಪೈ ಧರ್ಮಾಧ್ಯಕ್ಷರನ್ನು ಗೌರವಿಸಿದರು. ಭ್ರಾತೃತ್ವದ ಸಂಕೇತವಾಗಿ ಧರ್ಮಾಧ್ಯಕ್ಷರಿಗೆ ಪೂರ್ಣಿಮಾ ಶೆಣೈಯವರು ರಾಖಿಯನ್ನು ಕಟ್ಟಿ ಸಿಹಿತಿಂಡಿ ನೀಡಿದರು. 

ಬಳಿಕ ಮಾತನಾಡಿದ ಧರ್ಮಾಧ್ಯಕ್ಷರು ರಾಷ್ಟ್ರೀಯ ಹಿತಾಸಕ್ತಿ, ಸಮಗ್ರತೆ, ಐಕ್ಯತೆ ಹಾಗೂ ಸಾಮಾಜಿಕ ಸೌಹಾರ್ದತೆಯ ಈ ಭೇಟಿ ನಿಜಕ್ಕೂ ಸಂತೋಷದ ವಿಚಾರ. ಇಡೀ ಹಿಂದೂ ಸಮಾಜಕ್ಕೆ ಗಣೇಶೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು ಹಾಗೂ ಸಮಿತಿಯ ಸದಸ್ಯರನ್ನು ಅಭಿನಂದಿಸಿದರು.

ಸಮಿತಿಯ ಪ್ರಮುಖರಾದ ತರುಣ್ ಕೆ ಥಾಖರ್, ನಂದನ್ ಮಲ್ಯ,ಅಭಿಷೇಕ್ ಭಂಡಾರಿ, ದೇವರಾಯ ಶೆಣೈ, ರಮೇಶ್ ಪಟೇಲ್, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೊ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article