ಎರಡನೇ ಆಡಳಿತ ಭಾಷೆಯಾಗಿ ತುಳು: ರಾಜ್ಯ ಸರ್ಕಾರಕ್ಕೆ ಹೆಗ್ಗಡೆ ಅಭಿನಂದನೆ

ಎರಡನೇ ಆಡಳಿತ ಭಾಷೆಯಾಗಿ ತುಳು: ರಾಜ್ಯ ಸರ್ಕಾರಕ್ಕೆ ಹೆಗ್ಗಡೆ ಅಭಿನಂದನೆ

ಉಜಿರೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನಲ್ಲಿ ನಡೆದ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಪ್ರಾಚೀನ ತುಳು ಭಾಷೆಗೆ ಕರ್ನಾಟಕ ರಾಜ್ಯದ ಎರಡನೇ ಆಡಳಿತ ಭಾಷೆಯಾಗಿ ಅಧಿಕೃತ ಸ್ಥಾನಮಾನ ನೀಡಿರುವ ವಿಚಾರ ತಿಳಿದು ಸಂತೋಷವಾಯಿತು. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಹಾಗೂ ದೇಶ-ವಿದೇಶಗಳಲ್ಲಿರುವ ತುಳುವರ ಪರವಾಗಿ ರಾಜ್ಯ ಸರಕಾರಕ್ಕೆ ವಿಶೇಷ ಅಭಿನಂದನೆಗಳು.

ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಗೆ ಕೂಡಾ ಇದು ಸಹಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ.

2009ರಲ್ಲಿ ನಾವು ಉಜಿರೆಯಲ್ಲಿ ವಿಶ್ವತುಳು ಸಮ್ಮೇಳನ ಆಯೋಜಿಸಿ ತುಳು ಭಾಷೆ, ನಾಡು, ನುಡಿ, ಸಂಸ್ಕೃತಿ ಬಗ್ಗೆ ವಿಶೇಷ ಗಮನ ಸೆಳೆದಿರುತ್ತೇವೆ. ತುಳು ಗ್ರಾಮದ ಕಲ್ಪನೆ ಗೌರವ ರಕ್ಷಣೆಯ ಕೇಂದ್ರವಾಗಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿತ್ತು.

ನಮ್ಮ ಬೇಡಿಕೆಗೆ ಸರಕಾರದ ಸಕಾರಾತ್ಮಕವಾದ ಸ್ಪಂದನೆಗೆ ತುಳುನಾಡಿನ ಎಲ್ಲಾ ಅಭಿಮಾನಿಗಳ ಪರವಾಗಿ ವಿಶೇಷ ಅಭಿನಂದನೆಗಳು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article