ಸೌಲಭ್ಯ ಪಾವತಿ ಆಗ್ರಹಿಸಿ ನಿವೃತ್ತ  ಸಿಇಓ ಪ್ರತಿಭಟನಾ ಧರಣಿ

ಸೌಲಭ್ಯ ಪಾವತಿ ಆಗ್ರಹಿಸಿ ನಿವೃತ್ತ ಸಿಇಓ ಪ್ರತಿಭಟನಾ ಧರಣಿ


ಉಜಿರೆ: ಸುಲ್ಕೇರಿ ಮೊಗ್ರು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ತನಗೆ ಬರಬೇಕಾಗಿರುವ ನಿವೃತ್ತ ಸೌಲಭ್ಯಗಳ ಪಾವತಿಗೆ ಸಂಸ್ಥೆಯ ಆಡಳಿತ ಮಂಡಳಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಂಸ್ಥೆಯ ಮುಖ್ಯ ಕಚೇರಿಯ ಮುಂದೆ ಸೆ.10 ಗುರುವಾರ ಬೆಳಗ್ಗೆ  ಪ್ರತಿಭಟನಾ  ಧರಣಿ ಆರಂಭಿಸಿದ್ದಾರೆ.

ಆಡಳಿತ ಮಂಡಳಿಯಿಂದ ಅನ್ಯಾಯಕ್ಕೆ ಒಳಗಾದ ಇನ್ನೋರ್ವ ಸಿಬ್ಬಂದಿ  ಪ್ರಭಾಕರ ಅವರೂ ಧರಣಿ ಕುಳಿತಿದ್ದಾರೆ.

ಐದು ವರ್ಷಗಳ ಕಾಲ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು ನಿವೃತ್ತರಾಗಿದ್ದು ನಿವೃತ್ತಿಯ ಬಳಿಕ ಅವರಿಗೆ ನಿವೃತ್ತಿ ಸೌಲಭ್ಯಗಳನ್ನು ನೀಡಲು ಉದ್ದೇಶಪೂರ್ವಕವಾಗಿ ಆಡಳಿತ ಮಂಡಳಿ ಅಡ್ಡಿ ಪಡಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಎಷ್ಟೆಲ್ಲ ಪ್ರಯತ್ನ ಗಳು ನಡೆಸಿದರೂ ಸಂಘ ನಿವೃತ್ತಿ ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿರುವ ಹಿನ್ನಲೆಯಲ್ಲಿ ಧರಣಿ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article