‘ಶಿಕ್ಷಣ ಭಾರತೀಯತೆ ಜೊತೆ ಬೆರೆತಾಗ ಮಾತ್ರ ಅದು ಉತ್ತಮವಾಗಲು ಸಾಧ್ಯ’: ಡಾ. ಎಚ್. ಎಸ್. ಶೆಟ್ಟಿ
ಮಂಗಳೂರಿನ ರಾಮಕೃಷ್ಣ ಮಿಷನ್ನಲ್ಲಿ ನಡೆದ ಮೇಧಾ - ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎರಡನೇ ದಿನದ ಶೈಕ್ಷಣಿಕ ವಿಚಾರ ಸಂಕಿರಣ, 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾ?ಣದ ಸ್ಮರಣಾರ್ಥ “ಶಿಕ್ಷಣದಿಂದ ಸಬಲೀಕರಣದತ್ತ, ಸಬಲೀಕರಣದಿಂದ ಉನ್ನತಿಯತ್ತ: ಚಾರಿತ್ರ್ಯ ಮತ್ತು ಸೇವೆಯಿಂದ ಬದುಕಿನ ನಿರ್ಮಾಣ” ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪುತ್ತೂರಿನವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ವಿಜಯನಾರಾಯಣ ಕೆ. ಎಂ. ಭಾಗವಹಿಸಿದರು.ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಎಂ.ಆರ್.ಪಿ.ಎಲ್. - ಒ.ಎನ್.ಜಿ.ಸಿ. ಯ ಮುಖ್ಯ ಮಹಾಪ್ರಬಂಧಕ ಪ್ರಶಾಂತ್ ಪೊದುವಾಳ್ ಮಾತನಾಡಿ, ರಾಮಕೃಷ್ಣ ಮಿಷನ್ ಹಾಗೂ ಎಂ ಆರ್ ಪಿ ಎಲ್ ಸಂಸ್ಥೆಯ ಸಂಬಂಧ ಕೇವಲ ಎರಡು ಸಂಸ್ಥೆಗಳ ಪಾಲುದಾರಿಕೆ ಮಾತ್ರವಲ್ಲ, ಅದು ಸಮೃದ್ಧ, ಮೌಲ್ಯಯುತ ಸಮಾಜ ನಿರ್ಮಾಣದ ಕಡೆಗಿನ ಒಂದು ಬದ್ಧತೆಯಾಗಿದೆ. ಶಿಕ್ಷಣ ಎಲ್ಲಾ ಸಾಮಾಜಿಕ ಬದಲಾವಣೆಯ ತಳಹದಿ. ಸಮಾಜದ ಸೇವೆ ಅತ್ಯಂತ ಉನ್ನತ ಸ್ತರದ ಪೂಜೆಯಾಗಿದೆ, ಅದು ಒಂದು ವ್ಯಕ್ತಿಗಿರಬಹುದು ಅಥವಾ ಸಮಾಜಕಿರಬಹುದು ಅಥವಾ ಅಗತ್ಯ ಇರುವ ವ್ಯಕ್ತಿಗಳಿಗಿರಬಹುದು. ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ತಂದೆ-ತಾಯಿಯರ ಜೊತೆ ಉನ್ನತವಾದ ಸ್ಥಾನವಿದೆ ಎಂದರು.
ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಯುಕ್ತೇಶಾನಂದಜಿ ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಉಡುಪಿಯಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ದಾಮೋದರ ಶರ್ಮ ರವರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ “ಸಾರ್ಥಕ ಬೋಧನೆ: ತರಗತಿಯಾಚೆ ಬದುಕಿನ ಪಾಠಗಳು”ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಉಡುಪಿಯ ಹಿರಿಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಶಿಕ್ಷಣ ತಜ್ಞ ಡಾ. ಕುಮಾರ ಸ್ವಾಮಿ ಎಚ್.ಹಾಗೂ ಮಂಗಳೂರಿನ ಮಾನವ ಸಂಪನ್ಮೂಲ ತರಬೇತುದಾರ ಸೌಜನ್ಯ ಹೆಗ್ಡೆ ಭಾಗವಹಿಸಿದರು.
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ. ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ನೀರ್ಚಾಲು ವಂದಿಸಿದರು. ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರಿನ ವಿವಿಧ ಸಂಸ್ಥೆಗಳ ಆಸಕ್ತ ಶಿಕ್ಷಕರು, ವಿದ್ಯಾಥಿಧ್ಳು ಸೇರಿದಂತೆ ಸುಮಾರು 600 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು