ನಶಾ ಮುಕ್ತ ಭಾರತ ವಿಕಸಿತ ಅಭಿಯಾನ: ಕಾಲ್ನಡಿಗೆ ಜಾಥಾ
ವಿಶ್ವ ಫಿಸಿಯೋಥೆರಪಿ ದಿನಾಚರಣೆ-2026 ಪ್ರಯುಕ್ತ ನಶಾ ಮುಕ್ತ ವಿಕಸಿತ್ ಭಾರತ ಅಭಿಯಾನದ ಅಂಗವಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನಿಟ್ಟೆ ಇನ್ ನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿದ್ಯಾರ್ಥಿಗಳಿಂದ ಮಂಗಳವಾರ ಕುತ್ತಾರು ಮದನಿ ನಗರ ಮೈದಾನದಿಂದ ನಡೆದ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಕರ ಜೀವನ ಶೈಲಿ ನಮ್ಮದಾಗಬೇಕು. ಉತ್ತಮ ಆಹಾರ, ಅತ್ಯುತ್ತಮ ಚಟುವಟಿಕೆ ಮೂಲಕ ಇತರ ದುಶ್ಚಟಗಳಿಂದ ದೂರ ಇದ್ದು, ಸರಿಯಾದ ಸಮಯಕ್ಕೆ ಏಳಲು ನಿದ್ರಿಸುವ ಅಭ್ಯಾಸ ಮಾಡಲು ಸಾಧ್ಯ ಎಂದು ಹೇಳಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದಿಂದ ದೂರ ಇರುವ ಪ್ರತಿಜ್ಞಾ ವಿಧಿ ಬೋಧಿಸಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನಿಟ್ಟೆ ಇನ್ ನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ. ಧಾಣೇಶ್ ಕುಮಾರ್ ಸ್ವಾಗತಿಸಿದರು. ಕಾವ್ಯ ಭಟ್ ನಿರೂಪಿಸಿದರು. ಡಾ. ಸಮತಾ ಶೆಟ್ಟಿ ವಂದಿಸಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ್ ಶೆಟ್ಟಿ, ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ, ಕ್ಷೇಮ ಡೀನ್ ಡಾ. ಸಂದೀಪ್ ರೈ ಹಾಗೂ ಡಾ. ಜಯೇಶ್ ಉಪಸ್ಥಿತರಿದ್ದರು.