ಕರಾವಳಿಯಲ್ಲಿ ಸೌಹಾರ್ದತೆಯ ‘ಮೊಂತಿ ಫೆಸ್ತ್’ ಸಡಗರ
Tuesday, September 8, 2026
ಮಂಗಳೂರು: ಕರಾವಳಿ ಜಿಲ್ಲೆಗಳ ಕೆಥೋಲಿಕ್ ಸಮುದಾಯದ ಅತ್ಯಂತ ಪವಿತ್ರ ಹಾಗೂ ಸಂಸ್ಕ್ರತಿ ಬೆಸೆಯುವ ಹಬ್ಬವಾದ ‘ಮೊಂತಿ ಫೆಸ್ತ್’ (ಮರಿಯಮ್ಮನವರ ಜನ್ಮದಿನೋತ್ಸವ ಹಾಗೂ ಹೊಸ ತೆನೆ ಹಬ್ಬ) ಜಿಲ್ಲೆಯಾದ್ಯಂತ ಭಕ್ತಿ, ಶ್ರದ್ಧೆ ಮತ್ತು ಕೌಟುಂಬಿಕ ಸೌಹಾರ್ದತೆಯೊಂದಿಗೆ ಆಚರಿಸಲಾಗುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೂರಾರು ಚರ್ಚ್‌ಗಳಲ್ಲಿ ಮುಂಜಾನೆಯಿಂದಲೇ ಸಹಸ್ರಾರು ಭಕ್ತಾದಿಗಳು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು. ಕೆನರಾ ಕಮ್ಯೂನಿಕೇಷನ್‌ನ ನಿರ್ದೇಶಕ ವಂ. ಅನಿಲ್ ಐವನ್ ಫೆರ್ನಾಂಡಿಸ್ ಅವರು ಪ್ರಧಾನ ಯಾಜಕರಾಗಿ ಬಲಿಪೂಜೆ ಅರ್ಪಿಸಿದರು. ಬಳಿಕ ಪ್ರವಚನ ನೀಡಿದ ಅವರು, ಮಾತೆ ಮೇರಿಯವರು ಮನುಕುಲಕ್ಕೆ ಆದರ್ಶ ತಾಯಿಯಾಗಿದ್ದಾರೆ. ಅವರು ಪ್ರೀತಿ ಮಮತೆಯ ಮಮಕಾರ. ಅವರ ಸಹಣೆ ಹಾಗೂ ದೇವರ ಮೇಲಿನ ವಿಶ್ವಾಸ ಎಲ್ಲರಿಗೂ ಆದರ್ಶ ಎಂದರು.
ಧರ್ಮಗುರು ವಂ. ಸೈಮನ್ ಡಿಸೋಜ, ಬ್ರದರ್ ಪ್ರಿತೇಶ್ ಪಿಂಟೊ ಸಹಕರಿಸಿದರು.
ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಮತ್ತಿತರರು ಇದ್ದರು.
