ಸಿದ್ದಕಟ್ಟೆ: ಯುವಕನಿಗೆ ಚೂರಿ ಇರಿತ ಓರ್ವನ ಬಂಧನ

ಸಿದ್ದಕಟ್ಟೆ: ಯುವಕನಿಗೆ ಚೂರಿ ಇರಿತ ಓರ್ವನ ಬಂಧನ

ಬಂಟ್ವಾಳ: ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ಬಂಟ್ವಾಳ ಸಂಗಬೆಟ್ಟು ನಿವಾಸಿ ಪ್ರಕಾಶ್ ಪೂಜಾರಿಎಂಬಾತನಿಗೆ ಚೂರಿಇರಿತಕ್ಕೆ ಸಂಬಂಧಿಸಿ ಆರೋಪಿಗಳಲ್ಲಿ ಓರ್ವನನ್ನು ಅ.20 ರಂದು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ನಿವಾಸಿ ಕಿರಣ್ ಬಂಧಿತ ಆರೋಪಿಯಾಗಿದ್ದಾನೆ.

ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅ.18 ರಂದು ರಾತ್ರಿ ವೇಳೆ ಪ್ರಕಾಶ್ ಅವರು ಸಹೋದರ ಗಣೇಶ್ ಮತ್ತು ಇತರ 5 ಜನ ಗೆಳೆಯರೊಂದಿಗೆ ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ನಿಂತಿದ್ದಾಗ, ಅಲ್ಲಿಗೆ ಬಂದ ಆರೋಪಿಗಳಾದ ಅಕ್ಷಿತ್, ಕಿರಣ್, ರಂಜು, ಅಜೀತ್, ಧನುಷ್, ಸಂತೋಷ್ ಹಾಗೂ ರಾಜು ಎಂಬವರುಗಳು ಸ್ವಲ್ಪ ಮುಂದೆ ತಾವು ಬಂದಿದ್ದ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪ್ರಕಾಶ್ ಅವರನ್ನು ಕರೆದಿರುತ್ತಾರೆ. 

ಆರೋಪಿಗಳಿದ್ದಲ್ಲಿಗೆ ಪ್ರಕಾಶ್ ಅವರು ತೆರಳಿದಾಗ, ಆರೋಪಿಗಳು ಸೇರಿ ಪ್ರಕಾಶ್ ಅವರಿಗೆ ಹಲ್ಲೆ ನಡೆಸಿರುತ್ತಾರೆ. ಆರೋಪಿಗಳ ಪೈಕಿ ಅಕ್ಷಿತ್ ಎಂಬಾತನು ಚೂರಿಯಿಂದ ಪ್ರಕಾಶ್ ಅವರಿಗೆ ಹಲವು ಬಾರಿ ಚುಚ್ಚಿರುತ್ತಾನೆ. ಗಾಯಗೊಂಡ ಪ್ರಕಾಶ್ ಅವರನ್ನು ಗಣೇಶ್ ಹಾಗೂ ಇತರರು ಚಿಕಿತ್ಸೆಗಾಗಿ ಮೂಡುಬಿದಿರೆ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಬಗ್ಗೆ ಗಣೇಶ್ ಅವರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇತರರ ಪತ್ತೆಗೆ ತನಿಖೆ ಮುಂದುವರೆದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article