ಈಜು ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಆಯ್ಕೆ
Friday, October 9, 2026
ಬಂಟ್ಚಾಳ: ಮಂಗಳೂರಿನ ಮಂಗಳ ಈಜು ಕೊಳದಲ್ಲಿ ಶುಕ್ರವಾರ ನಡೆದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಈಜು ಸ್ಫರ್ಧೆ ಯ ಹುಡುಗಿಯರ ವಿಭಾಗದಲ್ಲಿ ಕಲ್ಕಡ್ಕ ಶ್ರೀರಾಮ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅನರ್ಘ್ಯ ಎ ಆರ್ 200 ಮೀಟರ್ ಇಂಡಿಯುಜುವಲ್ ಪದಕ , 200 ಮೀಟರ್ ಬ್ಯಾಕ್ ಸ್ಟ್ರೋಕ್ ಹಾಗೂ 400 ಮೀ ಫ್ರೀಸ್ಟೈಲ್ ನಲ್ಲಿ 3 ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಈಕೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ.ಕೆ ನಾಯ್ಕ್ , ಅಶೋಕ್ ದೇವಾಡಿಗ ಮತ್ತು ಉಮೇಶ್ ವಿಟ್ಲ ಇವರ ಶಿಷ್ಯೆಯಾಗಿದ್ದು ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತುದಾರದ ಲೋಕರಾಜ್ ವಿಟ್ಲ ಮತ್ತು ತರಬೇತುದಾರರಾದ ಸಂಜಯ್ ಮತ್ತು ಗಗನ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ.
ಅಶೋಕ್ ಕುಮಾರ್ ಬರಿಮಾರು ಮತ್ತು ರೋಹಿಣಿ. ಬಿ ಯವರ ಪುತ್ರಿಯಾಗಿದ್ದಾಳೆ.