ನ.7 ರಂದು ಕಾರ್ಕಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ-ಕೋಟೆ ಎಸ್.‌ ರಾಮಭಟ್ಟ ಸಮ್ಮೇಳನಾಧ್ಯಕ್ಷ: ಸಾಹಿತ್ಯ ಸಮ್ಮೇಳನ ಕಾರ್ಕಳದ ಹಬ್ಬ: ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ

ನ.7 ರಂದು ಕಾರ್ಕಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ-ಕೋಟೆ ಎಸ್.‌ ರಾಮಭಟ್ಟ ಸಮ್ಮೇಳನಾಧ್ಯಕ್ಷ: ಸಾಹಿತ್ಯ ಸಮ್ಮೇಳನ ಕಾರ್ಕಳದ ಹಬ್ಬ: ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ


ಕಾರ್ಕಳ: ಕಾರ್ಕಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನ. 7ರ ಶನಿವಾರ ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆಯಲಿದೆ ಇದು ಕಾರ್ಕಳದ ಹಬ್ಬವಾಗಲಿದೆ ಎಂದು ಕ.ಸಾ.ಪ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ ಹೇಳಿದರು. 

ಬುಧವಾರ ಕಾರ್ಕಳ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ನಿಟ್ಟೆ ವಿನಯ ಹೆಗ್ಡೆ ವೇದಿಕೆಯಲ್ಲಿ ಸಾಹಿತಿ, ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಕೋಟೆ ಎಸ್.‌ ರಾಮ ಭಟ್ಟ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಲಿದೆ ಎಂದರು. 

ಅಂದು ಬೆಳಗ್ಗೆ 8 ಗಂಟೆಗೆ ರಾಜೇಶ್ವರಿ ಎಜ್ಯುಕೇಶನ್‌ ಫೌಂಡೇಶನ್‌ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಧ್ವಜಾರೋಹಣಗೈಯಲಿರುವರು. ಸಾಣೂರು ಗ್ರಾಮ ಪಂಚಾಯತ್‌ ನಿಕಟಪೂರ್ವ ಅಧ್ಯಕ್ಷ ಯುವರಾಜ್‌ ಜೈನ್‌ ಉಪಸ್ಥಿತರಿರುವರು. ಉದ್ಯಮಿ ವೈ. ಕೃಷ್ಣ ಶೆಟ್ಟಿ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಲಿರುವರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ‌ ಸಮ್ಮೇಳನ ಉದ್ಘಾಟಿಸಲಿರುವರು. ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಬರೆದ ಶಿಕ್ಷಕನೋರ್ವನ ಕಥಾಲೋಕ, ದೇವದಾಸ್ ಕೆರೆಮನೆ ಅವರ ಉಯ್ಯಾಲೆ, ಡಾ. ಸುಮತಿ ಪಿ. ಅವರ ನೆರಳು ಬೆಳಕಿನ ನಡುವೆ, ಆರ್.‌ ರಮೇಶ್‌ ಪ್ರಭು ಅವರು ಬರೆದ ಮಾನವ ಜನ್ಮ ಸರ್ವಶ್ರೇಷ್ಠ ಕೃತಿಗಳನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಇದೇ ಸಂದರ್ಭ ಬಿಡುಗಡೆಗೊಳಿಸಲಿರುವರು. 

ಶಾಸಕ ವಿ. ಸುನಿಲ್‌ ಕುಮಾರ್‌ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸಲಿರುವರು. 

ರಾಜ್ಯ ಕ್ವಾರಿ ಮತ್ತು ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಶಿಯೇಶನ್‌ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ದಶಪ್ರಭಾ ಸ್ಮರಣ ಸಂಚಿಕೆ ಅನಾವರಣಗೊಳಿಸಲಿರುವರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿರುವರು. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಸಿದ್ದಾಪುರ ವಾಸುದೇವ ಭಟ್‌, ಶ್ರೀನಾರಾಯಣ ಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ರಂಗ ಸಂಸ್ಕೃತಿ ಅಧ್ಯಕ್ಷ ಎಸ್.‌ ನಿತ್ಯಾನಂದ ಪೈ, ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್‌ ಸಾಣೂರು, ಸಾಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಶ್ರೀರಾಮ ಭಟ್‌, ಧನಲಕ್ಷ್ಮೀ ಎಕ್ಸ್‌ಪೋರ್ಟ್ಸ್‌ನ ಮಾಲಕ ಶ್ರೀಪತಿ ಭಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಕಳ ತಹಶೀಲ್ದಾರ್‌ ರಾಕೇಶ್‌ ಫ್ರಾನ್ಸಿಸ್‌ ಬ್ರಿಟ್ಟೊ, ಕಾರ್ಕಳ ಎಎಸ್‌ಪಿ ಇಶಿತಾ ಗುಪ್ತಾ, ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.‌ ಆರ್.‌, ತಾ.ಪಂ. ಇಒ ಪ್ರಶಾಂತ್‌ ರಾವ್‌ ಎಂ.ಪಿ., ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಕ.ಸಾ.ಪ. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿರುವರು. 

ಗೋಷ್ಠಿ -1

ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸ್ಥಿತಿಗತಿಗಳು ಕುರಿತು ಸಂವಾದ ನಡೆಯಲಿದೆ. ಹಿರಿಯ ಸಾಹಿತಿ ಡಾ| ಬಿ. ಜನಾರ್ಧನ ಭಟ್, ಅಶ್ವತ್‌ ಎಸ್.‌ ಎಲ್‌. ಭಾಗವಹಿಸುವರು. ಹಿರಿಯ ಸಾಂಸ್ಕೃತಿಕ ಚಿಂತಕ ಮುನಿರಾಜ ರೆಂಜಾಳ ಸಮನ್ವಯಕಾರರಾಗಿರಲಿದ್ದಾರೆ. 

ಗೋಷ್ಠಿ -2 

ಮಧ್ಯಾಹ್ನ 1ರಿಂದ 1:45ರವರೆಗೆ ಕಾರ್ಕಳದ ಸಾಹಿತಿಗಳು ಕುರಿತು ವಿದ್ಯಾರ್ಥಿ ಗೋಷ್ಠಿ ನಡೆಯಲಿದೆ. ವಿದ್ಯಾರ್ಥಿಗಳಾದ ಶ್ರೀಲಕ್ಷ್ಮೀ, ಮನಸ್ವಿ ಕುಲಾಲ್‌, ದತ್ತಾತ್ರೇಯ ಸುನಿಲ್‌ ಕುಮಾರ್‌, ಸಮೀಕ್ಷಾ, ವಿಭುದೇಂದ್ರ ವಿ., ಹೃತಿಕ್‌, ಶ್ರೀರಕ್ಷಾ ಶ್ರೀನಿವಾಸ್‌ ಗೋಷ್ಠಿಯಲ್ಲಿ ಪಾಲ್ಗೊಳ್ಳುವರು. 

ಗೋಷ್ಠಿ -3

ಮಧ್ಯಾಹ್ನ 2 ಗಂಟೆಯಿಂದ ಸಾಹಿತ್ಯ - ಸಂಸ್ಕೃತಿ ಗೋಷ್ಠಿ ನಡೆಯಲಿದ್ದು, ಜಾನಪದ ವಿದ್ವಾಂಸ ಡಾ| ಪ್ರಭಾಕರ್‌ ಜೋಶಿ ವಿಶೇಷ ಉಪನ್ಯಾಸ ನೀಡಲಿರುವರು. ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಪಿ.ವಿ. ಆನಂದ ಸಾಲಿಗ್ರಾಮ ಹಾಗೂ ಸತೀಶ್‌ ವಡ್ಡರ್ಸೆ ಉಪಸ್ಥಿತರಿರುವರು. 

ಪ್ರಶಸ್ತಿ ಪ್ರದಾನ 

ಡಾ. ಸುಧಾಕರ್‌ ಶೆಟ್ಟಿ ಪ್ರಾಯೋಜಕತ್ವದಲ್ಲಿ ದಿ. ಪ್ರೊ. ಎಂ. ರಾಮಚಂದ್ರ ಸಂಸ್ಮರಣೆಯಲ್ಲಿ ನೀಡಲಾಗುವ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿ, ದಿ. ಗೋಪಾಲ ಭಂಡಾರಿ ಸ್ಮರಣಾರ್ಥ ಕೊಡಮಾಡುವ ಸೃಜನ ಸಾಹಿತ್ಯ ಸೌರಭ ಪ್ರಶಸ್ತಿ, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ಕರುನಾಡ ಸಿರಿ ಪ್ರಶಸ್ತಿ, ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆ ಕೊಡಮಾಡುವ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಗುವುದು ಎಂದು ಕೊಂಡಳ್ಳಿ ತಿಳಿಸಿದರು. 

ಸಮಾರೋಪ ಸಮಾರಂಭ 

ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಎಂ.ಆರ್.ಜಿ. ಗ್ರೂಪ್‌ನ ಸಂಸ್ಥಾಪಕ ಕೆ. ಪ್ರಕಾಶ್ ಶೆಟ್ಟಿ ಅವರು ಸಾಧಕರನ್ನು ಸನ್ಮಾನಿಸಲಿದ್ದಾರೆ. ಎಸ್.ಕೆ.ಎಸ್. ಇಂಡಸ್ಟ್ರೀಸ್ ಹಾಗೂ ಎಲಿಕ್ಸರ್ ಇಂಡಿಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಜಿ. ರಾಮಕೃಷ್ಣ ಆಚಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಪತ್ ಉಡುಪಿ ಜಿಲ್ಲೆಯ ಸ್ಥಾಪಕಾಧ್ಯಕ್ಷ‌ ಎ.ಎಸ್.ಎನ್. ಹೆಬ್ಬಾರ್ ಅವರು ಸಮಾರೋಪ ಭಾಷಣ ಮಾಡಲಿರುವರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ‌ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಕೋಟೆ ಎಸ್. ರಾಮ ಭಟ್ಟ ಪ್ರತಿಸ್ಪಂದನೆಗೈಯಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ‌ ನೀಲಾವರ ಸುರೇಂದ್ರ ಅಡಿಗ ಅವರು ಜಿಲ್ಲಾಧ್ಯಕ್ಷರ ನುಡಿ ಆಡಲಿದ್ದಾರೆ.

ಸಮಾರಂಭದಲ್ಲಿ ಖ್ಯಾತ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್, ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಕೋಟ್ಯಾನ್, ವಿ.ವಿ.ಪ. ಪೂ. ಕಾಲೇಜು ಮುಂಡ್ಕೂರು ಆಡಳಿತ ಮಂಡಳಿಯ ಅಧ್ಯಕ್ಷ ಗುರುಪ್ರಸಾದ್ ಸುಧಾಕರ ಶೆಟ್ಟಿ ಮುಲ್ಲಡ್ಕ, ಪ್ಯಾರದೀಪ್ ಫಾಸ್ಫೇಟ್ಸ್ ಲಿಮಿಟೆಡ್ ಜಂಟಿ ಜನರಲ್ ಮ್ಯಾನೇಜರ್ ಕೆ.ಬಿ. ಕೀರ್ತನ್ ಕುಮಾರ್, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಹ ಸಂಸ್ಥಾಪಕ ಗಣನಾಥ ಶೆಟ್ಟಿ ಬಿ., ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಹಾಗೂ ಗೌರವ ಕೋಶಾಧಿಕಾರಿ ಮನೋಹರ ಪಿ. ಉಪಸ್ಥಿತರಿರುವರು. 

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಲಕ್ಷ್ಮಣ ಕುಕ್ಕುಜೆ (ಶಿಕ್ಷಣ), ಗಣೇಶ್‌ ಶೆಟ್ಟಿ ಸಾಣೂರು (ಯಕ್ಷಗಾನ), ಮಾಲಿನಿ ರೈ (ಸಮಾಜ ಸೇವೆ), ಪಾರ್ಶ್ವನಾಥ ಜೈನ್‌ (ಮಾಧ್ಯಮ), ಮಹಮ್ಮದ್‌ ರಿಯಾಝ್‌ (ಸಾಹಿತ್ಯ), ಸತೀಶ್‌ ಜಿ. ಶೆಟ್ಟಿ (ಸಂಕೀರ್ಣ), ದೇಜು ಪಾಣಾರ (ದೈವಾರಾಧನೆ), ಫೆಲ್ಸಿ ಡೆನಿಸ್‌ ಕೆರ್ಡೋಜ ಪಟ್ಲ (ಕೃಷಿ), ರತ್ನಕಾರ ನಾಯ್ಕ ಮಿಯ್ಯಾರು (ಸಂಶೋಧನೆ), ನವೀನ್‌ ಕೆ. ಇನ್ನಾ (ತುಳುನಾಡ ಕನ್ನಡಿಗ) ಅವರನ್ನು ಸನ್ಮಾನಿಸಲಾಗುವುದು ಎಂದು ಕೊಂಡಳ್ಳಿ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ರಾಜೇಶ್ವರಿ ಎಜ್ಯುಕೇಶನ್‌ ಫೌಂಡೇಶನ್‌ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಉದ್ಯಮಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಕಸಾಪ ಸಮಿತಿಯ ಮೋಹನ್‌ ಪಡಿವಾಳ್‌, ನಿತ್ಯಾನಂದ ಪೈ, ದೇವದಾಸ್‌ ಕೆರೆಮನೆ, ಕಾರ್ಕಳ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್‌‌ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article