ಅನೈತಿಕ ಸಂಬಂಧ ಶಂಕೆ: ಪತ್ನಿಗೆ ಚೂರಿಯಿಂದ ಇರಿದು ಪತಿ ಕೊಲೆ

ಅನೈತಿಕ ಸಂಬಂಧ ಶಂಕೆ: ಪತ್ನಿಗೆ ಚೂರಿಯಿಂದ ಇರಿದು ಪತಿ ಕೊಲೆ

ಕಾವೂರು: ಹೆಂಡತಿಯ ಅನೈತಿಕ ಸಂಬಂಧ ಶಂಕಿಸಿ ಪತ್ನಿಗೆ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉರುಂದಾಡಿಗುಡ್ಡೆ ಎಂಬಲ್ಲಿ ರವಿವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಮೂಲತಃ ಬಿಜಾಪುರ ಜಿಲ್ಲೆಯ ಸದ್ಯ ಕಾವೂರು ಉರುಂದಾಡಿ ಗುಡ್ಡೆ ಹರೀಶ್ ಕುಮಾರ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿರುವ ಸೊನಾಲಿ (30) ಎಂದು ತಿಳಿದು ಬಂದಿದ್ದು, ಆಕೆಯ ಪತಿ ಶಿವಲಿಂಗಪ್ಪ ಮಾದರ (40) ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ.

ಪತ್ನಿ ಸೊನಾಲಿಗೆ ಅನೈತಿಕ ಸಂಬಂಧ ಇರುವುದಾಗಿ ಗಂಡ ಹೆಂಡತಿ ನಡುವೆ ಹಲವು ಬಾರಿ ಜಗಳವಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ರವಿವಾರ ತಡರಾತ್ರಿ ಗಂಡ-ಹೆಂಡತಿಯ ನಡುವೆ ತೀವ್ರ ಜಗಳ ನಡೆದು ಮನೆಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಚೂರಿ ಇರಿತದಿಂದ ಸೊನಾಲಿ ಅವರ ಕುತ್ತಿಗೆಗೆ ಗಂಭೀರಗಾಯವಾಗಿ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶಿವಲಿಂಗಪ್ಪ ಮಾದರ ಮತ್ತು ಸೊನಾಲಿ ದಂಪತಿಗೆ ಇಬ್ಬರು ಮಕ್ಕಳಿದ್ದು ಅವರು ಶಿವಲಿಂಗಪ್ಪ ಅವರ ಸಹೋದರಿಯ ಮನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article