ಕಿನ್ನಿಗೋಳಿ ಮನ್ನಬೆಟ್ಟುವಿನಲ್ಲಿ ನಿರ್ಮಾಣವಾದ ಮಲತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರ ವಿರೋಧ
ಪಟ್ಟಣ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳು ಬರುವ ಮೊದಲು ಘಟಕ ಆರಂಭಿಸಲಾಗಿದೆ. ಆಗ ಅಧಿಕಾರಲ್ಲಿದ್ದ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಆರೋಗ್ಯ ಅಧಿಕಾರಿಗಳು ಇಲ್ಲಿನ ಗ್ರಾಮದ ಜನರಿಗೆ ಯಾವ ಘಟಕ ಆಗುತ್ತೆ ಎಂಬ ವಿಷಯವನ್ನು ಮುಚ್ಚಿಟ್ಟು ಅಲ್ಲಿನ ಗ್ರಾಮಸ್ಥರ ಯಾವ ಅಭಿಪ್ರಾಯವನ್ನು ಗಣನೆ ತೆಗೆದುಕೊಳ್ಳದೆ ಅವರದೇ ನಿರ್ಣಯದಂತೆ ಘಟಕ ಕಾಮಗಾರಿ ನಡೆದಿದೆ ನಮಗೆ ಯಾವ ಮಾಹಿತಿಯು ನೀಡಿಲ್ಲ ಪತ್ರಿಕೆಯಲ್ಲಿ ವರದಿ ಬಂದ ಬಳಿಕ ಮಾಹಿತಿ ಗೊತ್ತಾಯಿತು. ನಾವು ತುಂಬಾ ಸಲ ಪಟ್ಟಣ ಪಂಚಾಯತ್ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಘಟಕ ಆರಂಭವಾದರೆ ಸಮಸ್ಯೆ ಖಂಡಿತ ಆಗುತ್ತದೆ, ಹಾಗೂ ಇದರ ಪಕ್ಕದಲ್ಲಿ ಸುಮಾರು 3 ಎಕರೆ ಜಾಗದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಎಸ್‌ಟಿಪಿ ಘಟಕ ಮಾಡುವ ಯೋಜನೆ ಇದೆ ಅದಕ್ಕೆ ನಮ್ಮ ವಿರೋಧವಿದೆ ಎಂದು ಅಲ್ಲಿನ ನಿವಾಸಿ ಹರೀಶ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಪಂಚಾಯತ್ ಮುಂಭಾಗದಲ್ಲಿ ಸಭೆ ಸೇರಿ ಪ್ರತಿಭಟನೆ ಮಾಡುವುದು ಅಗತ್ಯವಿದೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಮತ್ತೆ ಜನರ ವಿರೋಧವಿದೆ ಎಂದು ತಿಳಿಸಬೇಕು. ಮಲ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ಘಟಕ ವಿರೋಧಿ ಹೋರಾಟ ಸಮಿತಿ ಮಾಡಬೇಕು ಇದರ ಮೂಲಕ ಹೋರಾಟ ಮಾಡಬೇಕು ಎಂದು ಸ್ಥಳೀಯ ಕಟ್ಟಡದ ಮಾಲಿಕ ದೀಪಕ್ ಫೆರ್ನಾಂಡಿಸ್ ತಿಳಿಸಿದರು.
ವಾರ್ಡ್ ಸದಸ್ಯೆ ಕೋಕಿಲ್ ಡಿ. ಅಮೀನ್ ಮಾತನಾಡಿ, ಇಲ್ಲಿನ ಪ್ರದೇಶ ತಗ್ಗು ಪ್ರದೇಶವಾಗಿದ್ದು, ನೀರಿನ ಒರೆತವಿದ್ದು, ಕಸ ತ್ಯಾಜ್ಯದ ಮಲೀನ ನೀರು ಪಕ್ಕದ ಜಾಗಗಳ ತೋಟ ಬಾವಿಗಳಿಗೆ ಸೇರಿಕೊಳ್ಳುತ್ತಿದೆ, ಸುಮಾರು ೫೦ಕ್ಕೂ ಹೆಚ್ಚು ಮನೆ ಇದೆ, 5 ಶಾಲೆಗಳು, ಚರ್ಚ್ ಇದೆ. ಆದುದರಿಂದ ಇಲ್ಲಿನ ಜಾಗಗಳು ತ್ಯಾಜ್ಯ ಘಟಕ ಮಾಡಲು ಯೋಗ್ಯ ಅಲ್ಲ ಮೊದಲಿನಿಂದಲೂ ನಾವು ವಿರೋಧ ಮಾಡಲಾಗಿದೆ ನಮ್ಮ ಮಾತು ಯಾರು ಕೇಳುವುದಿಲ್ಲ ಎಂದು ತಿಳಿಸಿದರು.
ಅಲ್ಲಿನ ವಾರ್ಡ್ ಸದಸ್ಯರಾದ ಕೋಕಿಲ್ ಡಿ. ಅಮೀನ್, ಪ್ರಕಾಶ್ ಆಚಾರ್, ಚಂದ್ರ ರಾಣ್ಯ, ಸುನೀತಾ ರೋಡ್ರಿಗಸ್, ಸುನೀಲ್ ಆಳ್ವ ಸಮಸ್ಯೆ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದರು. ಪಕ್ಕದ ಶಾಲೆಯ ಪೋಷಕರ ಸಮಿತಿಯ ಸಂದೀಪ್ ಶೆಟ್ಟಿಅವರನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಚರ್ಚ್ ಸಮಿತಿಯ ಲ್ಯಾನ್ಸಿ, ಲೈನಲ್ ಪಿಂಟೋ, ಪ್ರವೀಣ್, ಸುದರ್ಶನ್, ಲಕ್ಷ್ಮನ್ ಕುಕ್ಯಾನ್, ಲ್ಯಾನ್ಸಿ ಡಿಸೋಜ, ಚಚ್‌ರ್ ಕಮಿಟಿಯ ವಿಲಿಯಂ, ಲೈನಲ್ ಪಿಂಟೋ, ವಾರ್ಡ್ ಗುರಿಕಾರರಾದ ಹಿಲ್ಡಾ ಡಿಸೋಜ, ಲ್ಯಾನ್ಸಿ ಪಿರೇರಾ, ಪದ್ಮಿನಿ, ಶಾಂತಾ, ಚಂದ್ರಿಕಾ, ಪೌಲಿನ್, ಲ್ಯಾನ್ಸ್ ಲೋಬೋ, ಶ್ರೀನಿವಾಸ, ನೆಲ್ಸನ್, ರೂಡಿ ಜಾನ್ಸನ್, ಪ್ರತಿಮಾ, ಉದಯ, ದಿವ್ಯಾ, ಪರಿಸರದ ಮೆರಿವೆಲ್ ಕಾನ್ವೆಂಟಿನ ಭಗಿನಿಯರು, ಶಾಲಾ ಸಮಿತಿಯ ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.