ಹೆಜ್ಜೇನು ಕಡಿತ: ಮೂವರು ಆಸ್ಪತ್ರೆಗೆ ದಾಖಲು
Monday, October 26, 2026
ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೆಳಗಿನ ಪುನರೂರು ಬಳಿ ಕಳೆದ ಎರಡು ದಿನಗಳಿಂದ ಸಾರ್ವಜನಿಕರಿಗೆ ಹೆಜ್ಜೇನು ಬಾಧೆ ನೀಡುತ್ತಿದ್ದು, ಸೋಮವಾರ ಮೂರು ಮಂದಿಗೆ ದಾಳಿ ಮಾಡಿ ಕಡಿದು ಆಸ್ಪತ್ರೆಗೆ ದಾಖಲುಗೊಂಡ ಘಟನೆ ನಡೆದಿದೆ.
ಪುನರೂರು ನಿವಾಸಿ ಮುಬಾರಕ್, ಚರಣ್ ದೇವಾಡಿಗ, ಹೇಮಂತ್ ದೇವಾಡಿಗ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾನೆ ಹಾಲು ಕೊಂಡು ಹೋಗುತ್ತಿದ್ದ ದಿನೇಶ್ ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಅವರು ಸ್ವಲ್ಪದರಲ್ಲಿ ಪಾರಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ದಿನೇಶ್ ರಾವ್ ಪುನರೂರು ತಿಳಿಸಿದ್ದಾರೆ.