ಕ್ಲೋಕೇಟ್ ಟೆಕ್ನಾಲಜೀಸ್ ಪ್ರೈ.ಲಿ. ಉದ್ಘಾಟನಾ ಸಮಾರಂಭ
Sunday, October 4, 2026
ಕುಂದಾಪುರ: ಐಟಿ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಕ್ಲೋಕೇಟ್ ಟೆಕ್ನಾಲಜೀಸ್ ಕುಂದಾಪುರ ಇವರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಅ.3 ರಂದು ಕುಂದಾಪುರದ ಶ್ರೀ ವೆಂಕಟರಮಣ ಆರ್ಕೆಡ್ ನ 2ನೇ ಮಾಳಿಗೆಯ ಮಹಡಿಯಲ್ಲಿ ನೆರವೇರಿತು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಗಣೇಶ್.ಕೆ ಅವರು ಮಾತನಾಡಿ " ಕುಂದಾಪುರದಂತ ಚಿಕ್ಕ ನಗರದಲ್ಲಿರುವ ಈ ಕಂಪನಿಯು ಲಂಡನ್ ನಂತಹ ದೊಡ್ಡ ನಗರದಲ್ಲಿ ಗ್ರಾಹಕರಿಗೆ ಸಾಫ್ಟ್ ವೇರ್ ಸರ್ವಿಸ್ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯ ಎಂದು ತಮ್ಮ ಮಾತುಗಳಿಂದ ನೆರೆದವರ ಮುಂದೆ ಶುಭ ನುಡಿದರು.
ಇದೇ ಸಂದರ್ಭದಲ್ಲಿ ಕ್ಲೋಕೇಟ್ ಸಂಸ್ಥೆಯ ಸಿ.ಎಸ್. ಆರ್ ನಿಧಿಯಿಂದ ಕೊಡ ಮಾಡಿದ ರೂ. 55,000 ಚೆಕ್ಕನ್ನು ಕೆ.ಪಿ.ಎಸ್ ಶಾಲೆ ಕೋಟೇಶ್ವರ ಇವರ ಗೌರವ ಶಿಕ್ಷಕಿಯರ ವೇತನದ ಸಲುವಾಗಿ ಹಸ್ತಾಂತರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಪ್ರಾಜೆಕ್ಟ್ ಹೆಡ್ ಶಶಿಧರ ಶೆಟ್ಟಿ ಮೂಡುಗೋಪಾಡಿ ಕಳೆದ 17 ವರ್ಷಗಳಿಂದ ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಕೌಶಲ್ಯ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.
ಯು.ಕೆ ಮತ್ತು ಇನ್ನಿತರ ದೇಶಗಳಿಗೆ ಸಾಫ್ಟ್‌ವೇರ್ ರಫ್ತು ಮಾಡುವ ಉದ್ದೇಶವನ್ನು ಮತ್ತು ದೃಢಸಂಕಲ್ಪವನ್ನು ಮುಂದಿಟ್ಟರು.
ಸಮಾರಂಭಕ್ಕೆ ಆಗಮಿಸಿದ ಮಹಾಸತಿ ಎಂಟರ್ಪ್ರೈಸಸ್ ಮುಖ್ಯಸ್ಥರಾದ ಕೊತ್ವಾಲ್ ಶೇಷಯ್ಯ ಶೇರುಗಾರ್, ಕ್ಲೋಕೇಟ್ ಸಂಸ್ಥೆಯ ಡೈರೆಕ್ಟರ್ ಆದ ಕ್ಯಾರಿ ಕ್ರಾಸ್ಟಿ ಹಾಗೂ ಕಂಪನಿಯ ಎಲ್ಲಾ ಉದ್ಯೋಗಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ನಿರೂಪಣೆಯನ್ನು ಸಂಸ್ಥೆಯ ಉದ್ಯೋಗಿಯಾದ ರಕ್ಷಿತಾ ಶೆಟ್ಟಿಗಾರ್ ಅವರು ನಿರ್ವಹಿಸಿದರು.

