ಬಟ್ಟೆ ಒಗೆಯಲು ಕೆರೆಗಿಳಿದ ಇಬ್ಬರು ಬಾಲಕಿಯರು ಬಲಿ
Sunday, October 25, 2026
ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಕಡುಬಿನ ಕೆರೆಯಲ್ಲಿ ಮುಳುಗಿ ಬಾಲಕಿಯರಿಬ್ಬರು ಸಾವನ್ನಪ್ಪಿದ್ದಾರೆ.
ಮೃತಪಟ್ಟ ಬಾಲಕಿಯರನ್ನು ಮುಳ್ಳಿಕಟ್ಟೆ ಪ್ರದೇಶದಲ್ಲಿ ವಾಸಿಸುವ ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ.
ಬಾಲಕಿಯರಿಬ್ಬರು ಬಟ್ಟೆ ಒಗೆಯಲು ಮತ್ತು ಸ್ನಾನ ಮಾಡಲು ಕೆರೆಗೆ ಹೋದಾಗ ಆಯತಪ್ಪಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.