ಅ.20 ರಂದು ಕರಾವಳಿ ಉತ್ಸವ ಮೈದಾನದಲ್ಲಿ ‘ಪಿಲಿ ನಲಿಕೆ’
ಪಿಲಿನಲಿಕೆ ವಿಶ್ವಾದ್ಯಂತ ಪರಿಚಯ ಆಗಬೇಕು ಎಂಬ ಉದ್ದೇಶದಿಂದ ಪಿಲಿನಲಿಕೆ ಸ್ಪರ್ಧೆ ನಡೆಸಲಾಗುತ್ತಿದೆ. ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಹುಲಿವೇಷ ಕುಣಿತದ ಮೂಲ ಸ್ವರೂಪ ಉಳಿಸುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಪಿಲಿನಲಿಕೆ ಆಯೋಜಿಸಲಾಗುತ್ತಿದೆ. ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಪಿಲಿನಲಿಕೆ ಉದ್ಘಾಟಿಸುವರು. ಪಿಲಿನಲಿಕೆ -11 ಸ್ಪರ್ಧಾಕಣದಲ್ಲಿ ಆಹ್ವಾನಿತ ೯ತಂಡಗಳಾದ ವೈದ್ಯನಾಥ -ಂಡ್ಸ್, ಟ್ಯಾಲೆಂಟ್ ಟೈಗರ್ಸ್, ಎಂಜಿಟಿ ಮುಳಿಹಿತ್ಲು, ಜೂನಿಯರ್ ಬಾಯ್ಸ್ ಚಿಲಿಂಬಿ, -ಂಡ್ಸ್ ಬಪ್ಪಾಲ್, ವೈಎ-ಸಿ ಎಮ್ಮೆಕೆರೆ, ಎಸ್ಎ-ಸಿ ಸೋಮೇಶ್ವರ, ಗೋರಕ್ಷನಾಥ ಹುಲಿ ಜೆಪ್ಪು, ಪೊಳಲಿ ಟೈಗರ್ಸ್ ಭಾಗವಹಿಸಲಿವೆ ಎಂದು ಪಿಲಿನಲಿಕೆ ಪ್ರತಿಷ್ಠಾನ ಮಂಗಳೂರು ಅಧ್ಯಕ್ಷ ಮಿಥುನ್ ರೈ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜೇತರಿಗೆ ಪ್ರಥಮ 10 ಲಕ್ಷ ರೂ., ದ್ವಿತೀಯ ಐದು ಲಕ್ಷ ರೂ., ತೃತೀಯ ಮೂರು ಲಕ್ಷ ರೂ. ಮತ್ತು -ಲಕ, ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ತಂಡಗಳಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. 30 ಸಾವಿರ ಮಂದಿ ಪ್ರೇಕ್ಷಕರು ಪಿಲಿನಲಿಕೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ತುಳುನಾಡಿನಲ್ಲಿ 150ರಷ್ಟು ನೋಂದಾಯಿತ ಹುಲಿವೇಷ ತಂಡಗಳಿದ್ದು, ಐದು ವರ್ಷ ಹುಲಿವೇಷ ಹಾಕಿರುವ, ಶೋಭಾಯಾತ್ರೆಯಲ್ಲಿ ಭಾಗವಹಿಸಿರುವ ತಂಡಗಳಿಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡುವಂತೆ ಮುಖ್ಯಮಂತ್ರಿ ಅವರನ್ನು ವಿನಂತಿಸಲಾಗಿದೆ ಎಂದು ಅವರು ಹೇಳಿದರು.
ಪ್ರಮುಖರಾದ ಡಾ. ಶಿವಶರಣ್ ಶೆಟ್ಟಿ, ಅವಿನಾಶ್ ಸುವರ್ಣ, ವಿಕಾಸ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಆನಂದ್ ಶೆಟ್ಟಿ ಉಪಸ್ಥಿತರಿದ್ದರು.
ಈ ಬಾರಿಯ ಪಿಲಿನಲಿಕೆಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಬಾಕ್ಸರ್ ವಿಜೇಂದರ್ ಸಿಂಗ್, ನಟರಾದ ಸುನೀಲ್ ಶೆಟ್ಟಿ, ವೃಷಭ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಉನ್ನಿ ಮುಕುಂದನ್, ತುಳು ಚಿತ್ರನಟರು, ದ.ಕ. ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಆಹ್ವಾನ ನೀಡಲಾಗಿದ್ದು, ಸಿಎಂ ಆಗಮಿಸುವ ವಿಶ್ವಾಸವಿದೆ ಎಂದು ಮಿಥುನ್ ರೈ ಹೇಳಿದರು.