ಅ.31, ನ.1: ಮಂಗಳೂರಲ್ಲಿ ‘ಆರ್ಯ’ ಜೆಸಿಐ ವಲಯ ಸಮ್ಮೇಳನ
ಅವರು ಇಂದು ನಗದ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಉದ್ಘಾಟನಾ ಸಮಾರಂಭದಲ್ಲಿ ಜೆಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿಶೇಷ ಅತಿಥಿಯಾಗಿರುವರು. ರಾಷ್ಟ್ರೀಯ ಜೆಸಿಐಯ ಆಡಳಿತ ಸಮಿತಿ ಸದಸ್ಯ ವೈ. ಸುಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಸೌದಿ ಅರೇಬಿಯಾದ ‘ಅಲ್ ಮುಝೈನ್’ ಸಂಸ್ಥೆಯ ಮುಖ್ಯಸ್ಥ, ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಚೆಯರ್ಮೆನ್ ಝಕರಿಯ ಜೋಕಟ್ಟೆ ಅವರಿಗೆ ನೀಡಲಾಗುವುದು. ಪೂರ್ವ ವಲಯಾಧ್ಯಕ್ಷ ಸಂಪತ್ ಬಿ. ಸುವರ್ಣ, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಇಶಾನ್ ಆರ್. ಅಗರ್ವಾಲ್, ನಿಕಟಪೂರ್ವ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಹಾಗೂ ಜೆ.ಎ.ಸಿ. ವಲಯಾಧ್ಯಕ್ಷ ಜಬ್ಬಾರ್ ಸಾಹೇಬ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಶಮ್ಮಿ ಲೈನ್ ಡ್ಯಾನ್ಸ್ ಅಕಾಡೆಮಿಯ ಅಂತರಾಷ್ಟ್ರ ಕಲಾವಿದರಾದ ಶೆರಲೈನ್ ಸಿಕ್ವೇರಾ ಮತ್ತು ತಂಡದಿಂದ ಸಾಂಸ್ಕೃತಿಕ ಸಂಜೆ ನಡೆಯಲಿದೆ. ವಿವಿಧ ಎಕ್ಸ್ ಪೋ ಪ್ರದರ್ಶನ ಏರ್ಪಡಿಸಲಾಗಿದ್ದು, ಸುಮಾರು ಒಂದು ಸಾವಿರ ಜೇಸಿ ಸದಸ್ಯರು ಎರಡು ದಿವಸ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೇಸಿಐ ವಲಯ 15ರಲ್ಲಿ 60 ಘಟಕಗಳಲ್ಲಿ 6,000 ಸದಸ್ಯರಿದ್ದಾರೆ. ತರಬೇತಿ ಮೂಲಕ ವ್ಯಕ್ತಿತ್ವ ವಿಕಸನ ಒಟ್ಟಿಗೆ ನಾಯಕತ್ವ ಗುಣ ಬೆಳೆಸುವುದೇ ಜೆಸಿಐ ಸಂಸ್ಥೆಯ ಮೂಲ ಉದ್ದೇಶ. 2026 ರಲ್ಲಿ 1,200ಮಿಕ್ಕಿ ತರಬೇತಿಗಳು ವಿವಿಧ ಶಾಲಾ, ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗಿದೆ.
ಪ್ಲಾಸ್ಟಿಕ್ ಬಾಟಲ್ ಮುಕ್ತ ಭಾರತದ ಕನಸಿಗೆ ಪೂರಕವಾಗಿ ಸಮಾಜಕ್ಕೆ ಸುಮಾರು 10,000 ಸ್ಟೀಲ್ ಬಾಟಲ್ ವಿತರಣೆ ಮಾಡಲಾಗಿದೆ. ‘ಕಮ್ಯುನಿಟಿ ಇಂಪಾಕ್ಟ್’ ಕಾರ್ಯಕ್ರಮದ ಅಡಿಯಲ್ಲಿ ಮನೆ ಇಲ್ಲದವರಿಗೆ ಮನೆ, ಬಸ್ ಶೆಲ್ಟರ್, ಹಾಸ್ಪಿಟಲ್ಗಳಿಗೆ ಪರೀಕ್ಷಾ ಮಷೀನ್, ವೀಲ್ ಚೈರ್ಸ್, ಅನೇಕ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊಡುಗೆಯನ್ನು ಹಸ್ತಾಂತರಿಸಲಾಗಿದೆ. 2000 ಯೂನಿಟ್ ರಕ್ತ ದಾನ ಮಾಡಲಾಗಿದೆ.
‘ಕಾಬಿಲ್’ ಕಾರ್ಯಕ್ರಮ ಅಡಿಯಲ್ಲಿ ಮಹಿಳೆಯರಿಗೆ ಸ್ವಾಲಂಬನೆ ಬದುಕಿಗೆ ವಿವಿಧ ತರಬೇತಿ ಕಾರ್ಯಕ್ರಮ, 3 ಜಿಲ್ಲೆಯ ಆಯ್ಕೆ ಮಾಡಿದ ಶಾಲಾ ಮಕ್ಕಳಿಗೆ ವಿವಿಧ ಪರೀಕ್ಷೆಗಳು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಶೀಲತೆ ಹಾಗೂ ವ್ಯವಹಾರ ಅಭಿವೃದ್ದಿಗೆ ’ಜೇಕಾಂ ಟೇಬಲ್’, ಪ್ರತಿ ಸದಸ್ಯತನದ ಮೇಲೆ ವೆಲ್ಫೇರ್ ಫಂಡ್ ಅಡಿಯಲ್ಲಿ ’ಡೆತ್ ಬೆನಿಫಿಟ್ ಕವರೇಜ್’, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಾ ತರಬೇತುದಾರರನ್ನು ರೂಪಿಸುವುದು, ವಾರ್ಷಿಕವಾಗಿ 150 ಮಕ್ಕಳಿಗೆ ಶಾಶ್ವತ ಸ್ಕಾಲರ್ಷಿಪ್ ವಿತರಣೆ, ವಾರ್ಷಿಕವಾಗಿ ಆರೇಳು ಬೇರೆ ಬೇರೆ ಸಮ್ಮೇಳನಗಳನ್ನು ಮಾಡುತ್ತ ನಾಯಕತ್ವ ಅವಕಾಶ ಸೃಷ್ಟಿಸುವುದು, ಘಟಕ ಮಟ್ಟದಲ್ಲಿ ಬೇರೆ ಬೇರೆ ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ಕಾಲರ್ಷಿಪ್ ವಿತರಣೆ ಮೊದಲಾದ ಸಮಾಜಮುಖಿ ಸೇವೆಗಳು ಜೆಸಿಐ ವಲಯ 15 ರಿಂದ ಈ ವರ್ಷ ನೆರವೇರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ನಿರ್ದೇಶಕ ರಶೀದ್ ವಿಟ್ಲ, ಜೆಸಿಐ ವಿಟ್ಲದ ಅಧ್ಯಕ್ಷ ಸಂದೀಪ್, ವಲಯಾಧ್ಯಕ್ಷರ ಕಾರ್ಯನಿರ್ವಾಹಕ ಲೂವಿಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.