ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ 5 ಕೋಟಿ ಅನುದಾನಕ್ಕೆ ಒತ್ತಾಯ

ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ 5 ಕೋಟಿ ಅನುದಾನಕ್ಕೆ ಒತ್ತಾಯ

ಮಂಗಳೂರು: ತುಳು ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವಂತೆ, ಕೇರಳದಲ್ಲೂ ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು. ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ ಕನಿಷ್ಠ 5 ಕೋಟಿ ರು. ಅನುದಾನ ನೀಡಬೇಕು ಎಂದು ಜೈ ತುಳುನಾಡ್ ಸ್ಥಾಪಕ ಸದಸ್ಯ ಕಿರಣ್ ತುಲುವೆ ಒತ್ತಾಯಿಸಿದ್ದಾರೆ.

ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಳು ಭಾಷೆಯ ಸಮಗ್ರ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಮಾನ್ಯತೆಗಾಗಿ ಮುಂದುವರಿದ ಭಾಗವಾಗಿ ತುಳು ಭಾಷೆಯ ಸಮಗ್ರ ಅಭಿವೃದ್ಧಿ, ಸಂರಕ್ಷಣೆ ಹಾಗೂ ಪರಿಣಾಮಕಾರಿ ಆಡಳಿತಾತ್ಮಕ ಅನುಷ್ಠಾನಕ್ಕಾಗಿ ಜೈ ತುಳುನಾಡ್ ಕುಡ್ಲ ಘಟಕ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಡುತ್ತಿದೆ ಎಂದರು.

ತುಳು ಭಾಷೆಯನ್ನು ನಿರ್ದಿಷ್ಟ ಜಿಲ್ಲೆಗಳಿಗೆ ಸೀಮಿತಗೊಳಿಸದೇ, ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು. ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ತಂದು, ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು. ಕೇರಳ ರಾಜ್ಯದಲ್ಲಿ ತುಳು ಭಾಷೆಯನ್ನು ಅಧಿಕೃಥ ಭಾಷೆಯಾಗಿ ಗುರಿಸುವಂತೆ ಕೇರಳ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಈಗಾಗಲೇ #TuluOfficialinKeralam ಎಂಬ ಸಾಮಾಜಿಕ ಜಾಲತಾಣದ ಅಭಿಯಾನ ಆರಂಭಿಸಿದ್ದೇವೆ ಎಂದರು.

‘ಮಂಗಳೂರು ಜಿಲ್ಲೆ’ ಮರುನಾಮಕರಣ:

ಉದ್ಯೋಗದ ನಿಮಿತ್ತ ತಮ್ಮ ಕುಟುಂಬ ಹಾಗೂ ಊರನ್ನು ತೊರೆದು ಹೊರಗಡೆ ನೆಲೆಸಿರುವ ಯುವ ಪೀಳಿಗೆ ‘ಬ್ರ್ಯಡ್ಡ್ ಮಂಗಳೂರು’ ಮೂಡಲಕ ಮತ್ತೆ ತಮ್ಮ ಊರಿಗೆ ಮತ್ತೆ ಮರುಳುವಂತಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಮರು ನಾಮಕರಣ ಮಾಡಬೇಕು. ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ ಸ್ಪಷ್ಟ ಕಲಾರ್ಯಯೋಜನೆ ರೂಪಿಸಬೇಕು, ತುಳು ಭಾಷೆಯ ಡಿಜಿಟಲ್ ಮತ್ತು ಆಡಳಿತಾತ್ಮಕ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಬೇಕು, ತುಳು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು, ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ ಕನಿಷ್ಠ ೫ ಕೋಟಿ ರು. ಅನುದಾನ ನೀಡಬೇಕು, ಉಡುಪಿ ಜಿಲ್ಲೆ ಮತ್ತು ಪುತ್ತೂರಿನಲ್ಲಿ ‘ತುಳು ಭವನ’ ನಿರ್ಮಿಸಬೇಕು, ಹಂತ ಹಂತವಾಗಿ ತುಳು ಲಿಪಿಯ ಬಳಕೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ಎಲ್ಲ ಬೇಡಿಕೆಗಳಿಗಾಗಿ ಜೈ ತುಳುನಾಡ್ ಕುಡ್ಲ ಘಟಕ ಪ್ರಜಾಸತ್ತಾತ್ಮಕ, ಶಾಂತಿಯುತ ಹಾಗೂ ಪಕ್ಷಾತೀತ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದರು.

ಅಧ್ಯಕ್ಷೆ ರಾಜಶ್ರೀ ಚಂದ್ರಶೇಖರ್, ಉಪಾಧ್ಯಕ್ಷ ಚೇತನ್ ಅಂಚನ್ ಮಂಜಲ್ಕಟ್ಟೆ, ಮಾಜಿ ಅಧ್ಯಕ್ಷ ಉದಯ್ ಪೂಂಜಾ ತಾರಿಪಾಡಿಗುತ್ತು, ಸಂಘಟನಾ ಕಾರ್ಯದರ್ಶಿ ನಿರಂಜನ್ ಕರ್ಕೇರ ಪೊರ್ಕೋಡಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article