ವಿಜಯೋತ್ಸವ: ದುರಾಡಳಿತಕ್ಕೆ ತಕ್ಕ ಪಾಠ
ದುರಾಡಳಿತಕ್ಕೆ ತಕ್ಕ ಪಾಠ..
ಸಂಸದ ಚೌಟ ಮಾತನಾಡಿ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟದ ಅಭ್ಯರ್ಥಿಗಳನ್ನು ಅಭೂತಪೂರ್ವವಾಗಿ ಗೆಲ್ಲಿಸುವ ಮೂಲಕ ರಾಜ್ಯದ ಶಿಕ್ಷಕರು ಹಾಗೂ ಪದವೀಧರ ಮತದಾರರು ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ದೇಶದಲ್ಲಿ ಇವಿಎಂ ಮೇಲೆ ಸದಾ ಗೂಬೆ ಕೂರಿಸುವ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರಿಗೆ ಈ ಫಲಿತಾಂಶವು ಕಣ್ಣು ತೆರೆಸಬೇಕಾಗಿದೆ. ಈ ಚುನಾವಣೆ ನಡೆದಿರುವುದು ಬ್ಯಾಲಟ್ ಪೇಪರ್ ಮೂಲಕ ಎನ್ನುವುದನ್ನು ಕಾಂಗ್ರೆಸ್‌ನವರು ಮರೆಯಬಾರದು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ಆಡಳಿತಾರೂಢ ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ರಾಜ್ಯದ ಜನತೆ ಎಷ್ಟೊಂದು ಬೇಸತ್ತು ಹೋಗಿದ್ದಾರೆ ಎನ್ನುವುದಕ್ಕೆ ನೇರ ಸಾಕ್ಷಿ. ಇಷ್ಟಾದ ಮೇಲೆಯೂ ರಾಹುಲ್ ಗಾಂಧಿ ಮತಪತ್ರಗಳನ್ನು ಅಥವಾ ಪ್ರಜ್ಞಾವಂತ ಮತದಾರರನ್ನೇ ನಿಂದಿಸುತ್ತಾರೆಯೇ? ನಾಟಕೀಯ ರಾಜಕೀಯದ ಮೂಲಕ ಕಾಂಗ್ರೆಸ್ ತನ್ನ ಪತನವನ್ನು ಮುಚ್ಚಿಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರ ಅಸ್ತಿತ್ವ ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಎಲ್ಲೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ" ಎಂದು ಹೇಳಿದರು.