ಜಾಗತಿಕ ಸಹೋದರತ್ವ ಇಂದು ಮರೆಯಾಗಿದೆ: ಶ್ರೀಕೃಷ್ಣ ಗಜಾನನ ಕುಲಕರ್ಣಿ ವಿಷಾದ
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಢೇ ಪಿ.ಕೃಷ್ಣ, ಸೇವೆ ಮತ್ತು ತ್ಯಾಗ ಹಾಗೂ ಸತ್ಯ ಮತ್ತು ಅಹಿಂಸೆಯ ತತ್ವದಡಿ ಭಾರತವನ್ನು ಕಟ್ಟಿದ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುವ ಮಹತ್ವದ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಕರೆನೀಡಿದರು.
ಯಾವುದೇ ರೀತಿಯ ಮೋಸ ವಂಚನೆ ಸುಳ್ಳು ಹೇಳದೆ ಧೈರ್ಯವಾಗಿರುವುದೇ ಸತ್ಯ ಹಾಗೂ ಯಾವುದೇ ಮತಪಂಥವಿಲ್ಲದೆ ಎಲ್ಲರನ್ನೂ ಪ್ರೀತಿಸುವುದೇ ಅಹಿಂಸೆ ಎಂಬುದು ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ಪರಿಕಲ್ಪನೆಯಾಗಿದ್ದು, ಮೂಲಭೂತವಾದಿಗಳು, ಹಿಂಸಾವಾದಿಗಳು ಹಾಗೂ ಕೋಮುವಾದಿಗಳನ್ನು ಗಾಂಧಿ ವಿರೋಧಿಸಿದ್ದರು ಎಂದು ತಿಳಿಸಿದ ಅವರು ಯುವ ಜನಾಂಗ ಸಾಮಾಜಿಕ ಜಾಲತಾಣಗಳ ಮಾಹಿತಿಗಳಿಗೆ ಬದಲಾಗಿ ಪುಸ್ತಕಗಳನ್ನು ಓದಿ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನಿವೃತ್ತ ಕುಲಪತಿ ಪ್ರೊ. ಬಿ.ಎ.ವಿವೇಕ್ ರೈ ಅವರು ಮಾತನಾಡಿ, ಹಣ, ಅಹಂಕಾರ, ಜಾತಿ ರಾಜಕಾರಣದಲ್ಲಿ ಬಳಲುತ್ತಿರುವ ವರ್ತಮಾನದ ಭಾರತಕ್ಕೆ ಮಹಾತ್ಮ ಗಾಂಧಿಯವರ ಆದರ್ಶವೇ ಪರಿಹಾರವಾಗಿದ್ದು, ಯಾವುದೇ ಹುದ್ದೆಯಲ್ಲಿದ್ದರೂ ನಿಮ್ಮ ನಿಮ್ಮ ಕರ್ತವ್ಯದಲ್ಲಿ ಬದ್ಧತೆ, ಪ್ರಾಮಾಣಿಕತೆ, ಸರಳತೆಯನ್ನು ರೂಢಿಸಿಕೊಂಡರೆ ಅದುವೇ ಗಾಂಧಿವಾದವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಎಲ್.ಸಿ. ಮಲ್ಲಯ್ಯ, ಭಾಷಾ ಸಾಮರಸ್ಯದ ಕುರಿತು ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಡಿಜಿಪಿ ಆರ್.ಚೇತನ್, ಬೆಂಗಳೂರು ಗಾಂಧಿ ಭವನ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಪುತ್ತೂರು ಕಜೆಮಾರಿನ ಕುಂಬ್ರ ಜತ್ತಪ್ಪ ರೈ ಪ್ರತಿಷ್ಟಾನದ ಸಂಸ್ಥಾಪಕ ಕೆ. ಪ್ರಮೋದ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಸ್ವಾಗತಿಸಿದರು. ಮಂಗಳೂರು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಅಮಿನ್ ಕೆ. ವಂದಿಸಿದರು. ಮಂಗಳೂರು ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯದರ್ಶಿ ವಾರುಣಿ ನಾಗರಾಜ್ ಅವರು ಕಾರ್ಯಕ್ರಮ ನಿರೂಪಿಸಿದರು.

