ಕೆಎಸ್‌ಆರ್‌ಟಿಸಿ ದಸರಾ ಪ್ರವಾಸ ಚಾಲನೆ
Sunday, October 11, 2026
ಮಂಗಳೂರು: 2026ನೇ ಸಾಲಿನ ದಸರಾ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಸುತ್ತಮುತ್ತಲಿನ ದೇವಸ್ಥಾನಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಭಾನುವಾರ ಲಾಲ್‌ಬಾಗ್ ಬಸ್ ನಿಲ್ದಾಣ ಆವರಣದಲ್ಲಿ ಚಾಲನೆ ನೀಡಲಾಯಿತು.
ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್, ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.
ಇಂದು ಮಂಗಳೂರಿನಿಂದ ತಲಕಾವೇರಿ ಭಾಗಮಂಡಲಕ್ಕೆ 03 ಬಸ್‌ಗಳಲ್ಲಿ 147 ಪ್ರಯಾಣಿಕರು, ಕೊಲ್ಲೂರು ಪ್ಯಾಕೇಜ್‌ಗೆ 06 ಬಸ್‌ಗಳಲ್ಲಿ 295 ಪ್ರಯಾಣಿಕರು, ಸಿಗಂದೂರು ಪ್ಯಾಕೇಜ್‌ನಲ್ಲಿ 05 ಬಸ್‌ಗಳಲ್ಲಿ 240 ಪ್ರಯಾಣಿಕರು, ಶೃಂಗೇರಿ ಪ್ಯಾಕೇಜ್‌ನಲ್ಲಿ 05 ಬಸ್‌ಗಳಲ್ಲಿ 245 ಪ್ರಯಾಣಿಕರು, ಮಂಗಳೂರು ನವದುರ್ಗಾಕ್ಕೆ 03 ಬಸ್‌ಗಳಲ್ಲಿ 130 ಪ್ರಯಾಣಿಕರು ಇದ್ದರು.
ಉಡುಪಿಯಿಂದ ಶೃಂಗೇರಿ ಪ್ಯಾಕೇಜ್‌ನಲ್ಲಿ 1 ಬಸ್‌ನಲ್ಲಿ 43 ಪ್ರಯಾಣಿಕರು, ಕೊಲ್ಲೂರು ಪ್ಯಾಕೇಜ್‌ನಲ್ಲಿ 01 ಬಸ್‌ನಲ್ಲಿ 28 ಪ್ರಯಾಣಿಕರು ಇದ್ದರು. ಒಟ್ಟು 25 ಬಸ್ಸು 1128 ಪ್ರಯಾಣಿಕರು ಇದ್ದರು.

