ಮಂಗಳೂರು-ರಾಸ್ ಅಲ್ ಖೈಮಾಗೆ ನೇರ ವಿಮಾನ

ಮಂಗಳೂರು-ರಾಸ್ ಅಲ್ ಖೈಮಾಗೆ ನೇರ ವಿಮಾನ

ಮಂಗಳೂರು: ಮಂಗಳೂರು ಮತ್ತು ಯುಎಇಯ ರಾಸ್ ಅಲ್ ಖೈಮಾಗೆ ನೇರ ವಿಮಾನ ಸೇವೆಯನ್ನು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಸೋಮವಾರ ಆರಂಭಿಸಿದೆ. ಈ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಸಂಪರ್ಕದಲ್ಲಿ ಮತ್ತೂಂದು ಮೈಲುಗಲ್ಲು ಸಾಧಿಸಿದೆ. 

ಐಎಕ್ಸ್ 871 ವಿಮಾನ 146 ಪ್ರಯಾಣಿಕರೊಂದಿಗೆ ಮಂಗಳೂರಿ ನಿಂದ ರಾಸ್ ಅಲ್ ಖೈಮಾಗೆ ತೆರಳಿತು. 36 ಪ್ರಯಾಣಿಕರಿದ್ದ ಐಎಕ್ಸ್ 872 ವಿಮಾನ ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ಆಗಮಿಸಿತು. ಚಳಿಗಾಲದ ವೇಳಾಪಟ್ಟಿ 2026ರ ಎರಡನೇ ದಿನದಂದು ಈ ಹೊಸ ಸೇವೆ ಆರಂಭಗೊಂಡಿದೆ. ಚಳಿಗಾಲದ ವೇಳಾಪಟ್ಟಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನಿಗದಿಯಾಗಿರುವ ವಾರದ 58 ಅಂತಾರಾಷ್ಟ್ರೀಯ ವಿಮಾನಗಳಲ್ಲಿ 38 ವಿಮಾನಗಳು ಯುಎಇಯ ಭಾಗವಾಗಿರುವ ದುಬೈ (20), ಅಬುಧಾಬಿ (16) ಮತ್ತು ರಾಸ್ ಅಲ್ ಖೈಮಾ (2) ನಗರಗಳಿಗೆ ಕಾರ್ಯನಿರ್ವಹಿಸುತ್ತವೆ ಹಾಗೂ ಉಳಿದವು ಮಧ್ಯಪ್ರಾಚ್ಯದ ಇತರ ಪ್ರಮುಖ ನಗರಳಿಗೆ ಹಾರಾಟ ನಡೆಸುತ್ತವೆ.

ವಾರದಲ್ಲಿ 2 ದಿನ..

ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಮತ್ತು ರಾಸ್ ಅಲ್ ಖೈಮಾ ನಡುವೆ ಸೋಮವಾರ ಮತ್ತು ಶನಿವಾರ ಕಾರ್ಯಾಚರಣೆ ನಡೆಸಲಿದೆ. ಐಎಕ್ಸ್ 871 ಮಂಗಳೂರಿನಿಂದ ಬೆಳಗ್ಗೆ 9.30ಕ್ಕೆ ಹೊರಡಲು ಮತ್ತು ಐಎಕ್ಸ್ 872 ರಾಸ್ ಅಲ್ ಖೈಮಾದಿಂದ ಸಂಜೆ 6.25ಕ್ಕೆ ಆಗಮಿಸಲು ನಿಗದಿಯಾಗಿದೆ. ರಾಸ್ ಅಲ್ ಖೈಮಾದಿಂದ ಶಾರ್ಜಾ ಮತ್ತು ದುಬೈಗೆ ರಸ್ತೆಯ ಮೂಲಕ ಸುಮಾರು ಒಂದು ಗಂಟೆಯ ದೂರ ಮಾತ್ರ ಇರುವುದರಿಂದ ಈ ಸೇವೆ ಅತ್ಯಂತ ಅನುಕೂಲಕರವಾಗಿದೆ. ಮಂಗಳೂರು ವಿಮಾನ ನಿಲ್ದಾಣವು ಪ್ರಸ್ತುತ 9 ಅಂತಾರಾಷ್ಟ್ರೀಯ ಮತ್ತು 6 ದೇಶೀಯ ವಲಯಗಳಿಗೆ ಸೇವೆ ಒದಗಿಸುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article