ವಿಧಾನ ಪರಿಷತ್ ಫಲಿತಾಂಶ ಕಾಂಗ್ರೆಸ್‌ನ ಅವಸಾನದ ಮುನ್ಸೂಚನೆ: ಸತೀಶ್ ಕುಂಪಲ

ವಿಧಾನ ಪರಿಷತ್ ಫಲಿತಾಂಶ ಕಾಂಗ್ರೆಸ್‌ನ ಅವಸಾನದ ಮುನ್ಸೂಚನೆ: ಸತೀಶ್ ಕುಂಪಲ

ಮಂಗಳೂರು: ರಾಜ್ಯದಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿರುವ ನಾಲ್ಕು ಕ್ಷೇತಗಳಲ್ಲಿ ಬಿ.ಜೆ.ಪಿ. ಎನ್.ಡಿ.ಎ. ಅಭ್ಯರ್ಥಿಗಳು ಜಯಭೇರಿ ಬಾರಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಅವಸಾನದ ಮುನ್ಸೂಚನೆಯಾಗಿದೆ ಎಂದು ದ.ಕ. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಅಭಿವೃದ್ಧಿ ಶೂನ್ಯತೆ, ದುರಾಡಳಿತ, ಮಿತಿಮೀರಿದ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ನಿಷ್ಕ್ರಿಯತೆ, ಅತಿಯಾದ ತುಷ್ಠೀಕರಣ, ಹಿಂದು ವಿರೋಧಿ ನಿಲುವು, ಹತೋಟಿ ತಪ್ಪಿದ ಮಾತುಗಳಿಗೆ ಮತದಾರರು ಈ ಫಲಿತಾಂಶ ಮೂಲಕ ಬೀಗ ಜಡಿದಿದ್ದಾರೆ. ಬಿ.ಜೆ.ಪಿ. ರಾಜ್ಯಾಧ್ಯಕ್ಷರ ಬಳ್ಳಾರಿ ಚಲೋ ಪ್ರತಿಭಟನೆಗೆ ಮತ್ತು ಪಕ್ಷದ ಸಂಘಟಿತ ಪ್ರಯತ್ನಕ್ಕೆ ಫಲ ಸಿಕ್ಕಿದೆ.

ರಾಜ್ಯದಲ್ಲಿ ಗ್ಯಾರಂಟಿ ಬದಲು ಸುಭದ್ರ, ನೆಮ್ಮದಿಯ ಬದುಕು ಮುಖ್ಯ ಎನ್ನುವುದು ಜನರ ಬಯಕೆಯಾಗಿದೆ. ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಗಳು ಜಯಶಾಲಿಯಾಗುವುದರಲ್ಲಿ ಸಂದೇಹವಿಲ್ಲ ಮತ್ತು 2028ಕ್ಕೆ ರಾಜ್ಯದಲ್ಲಿ ಮತದಾರರ ಆಶೀರ್ವಾದದಿಂದ ಕರ್ನಾಟಕದಲ್ಲಿ ಎನ್.ಡಿ.ಎ.ಯು ಅಧಿಕಾರದ ಗದ್ದುಗೆ ಏರಲಿದೆ ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article