ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ ಹಾಗೂ ಪಾಶ್ಚಿಮಾತ್ಯ ಪಾರ್ಟಿ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಆಗ್ರಹಿಸಿ ದುರ್ಗಾವಾಹಿನಿ, ಬಜರಂಗದಳ ಮನವಿ

ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ ಹಾಗೂ ಪಾಶ್ಚಿಮಾತ್ಯ ಪಾರ್ಟಿ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಆಗ್ರಹಿಸಿ ದುರ್ಗಾವಾಹಿನಿ, ಬಜರಂಗದಳ ಮನವಿ

ಮಂಗಳೂರು: ನವರಾತ್ರಿಯು ಭಾರತೀಯ ಸನಾತನ ಸಂಸ್ಕೃತಿಯ ಪವಿತ್ರವಾದ ಹಬ್ಬವಾಗಿದ್ದು, ಈ ದಿನಗಳಲ್ಲಿ ನಡೆಯುವ 'ದಾಂಡಿಯಾ/ಗರ್ಬಾ' ನೃತ್ಯವು ಹಿಂದೂ ಧರ್ಮೀಯರು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸುವ ಧಾರ್ಮಿಕ ಆಚರಣೆಯಾಗಿದೆ. ಆದರೆ, ಮಂಗಳೂರು ನಗರದ ಪಬ್‌ಗಳು, ಪಾರ್ಟಿ ಹಾಲ್‌ಗಳು ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ  'ದಾಂಡಿಯಾ' ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಡಿಜೆ ಮ್ಯೂಸಿಕ್ ಹಾಗೂ ಅಶ್ಲೀಲ ಪಾರ್ಟಿಗಳನ್ನು ಆಯೋಜಿಸುತ್ತಿರುವ ಕುರಿತು ಹಲವು ಪೋಸ್ಟರ್‌ಗಳು ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಈ ಕಾರ್ಯಕ್ರಮಗಳ ಮುಖಾಂತರ ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವನೆಗೆ ಆಸ್ಪದ ಮಾಡಿಕೊಡಲಾಗುತಿದೆಯ ಎಂಬುದು ಸಂಶಯ ವ್ಯಕ್ತವಾಗುತ್ತಿದೆ. ದಾಂಡಿಯಾದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಆಯೋಜಿಸುತ್ತಿರುವ ಈ ಕಾರ್ಯಕ್ರಮಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ.

ಆದ್ದರಿಂದ, ದಾಂಡಿಯಾ ಕಾರ್ಯಕ್ರಮದ ಮುಖಾಂತರ ಯುವಜನತೆಯನ್ನು ದುರ್ಮಾರ್ಗಕ್ಕೆ ಎಳೆಯುವ  ಇಂತಹ ಯಾವುದೇ ಅಸಭ್ಯ ಪಾರ್ಟಿ, ಫ್ಯಾಷನ್ ಶೋ ಅಶ್ಲೀಲ ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು, ಪೊಲೀಸ್ ಉಪ ಆಯುಕ್ತರನ್ನು ಭೇಟಿಯಾಗಿ ಮನವಿ ನೀಡಲಾಗಿದೆ. ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗಳಿಗೂ ಕೂಡ ದೂರು ನೀಡಲಾಗಿದ್ದು ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದಾಗಿ ಪ್ರಾಂತ ಮಾತೃಶಕ್ತಿ ಪ್ರಮುಖ್ ಸುರೇಖಾ ರಾಜ್, ಜಿಲ್ಲಾ ಬಜರಂಗದಳ ಸಂಯೋಜಕ್ ಪ್ರೀತಮ್ ಕಾಟಿಪಳ್ಳ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article