ಎಕ್ಸ್ ಪರ್ಟ್ ಕಾಲೇಜಿನಲ್ಲಿ ಗಾಂಧಿ-ಶಾಸ್ತ್ರೀ  ಜಯಂತಿ ಆಚರಣೆ:  ಗಾಂಧಿ-ಶಾಸ್ತ್ರೀ ಅನನ್ಯ ನಾಯಕರು

ಎಕ್ಸ್ ಪರ್ಟ್ ಕಾಲೇಜಿನಲ್ಲಿ ಗಾಂಧಿ-ಶಾಸ್ತ್ರೀ ಜಯಂತಿ ಆಚರಣೆ: ಗಾಂಧಿ-ಶಾಸ್ತ್ರೀ ಅನನ್ಯ ನಾಯಕರು


ಮಂಗಳೂರು: ಹಿಂಸಾಚಾರವಿಲ್ಲದೆ ಕೋಟ್ಯಂತರ  ಜನರನ್ನು ಹುರಿದುಂಬಿಸಿ ಹೋರಾಟಕ್ಕೆ ನೇತೃತ್ವ ನೀಡಿದ ನಾಯಕತ್ವ ಜಗತ್ತಿನಲ್ಲೇ ಅನನ್ಯವಾದುದು. ದ್ವೇಷ ಸಾಧನೆ ಮಾಡದೆ ಅಹಿಂಸೆಯ ಮೂಲಕ ಬ್ರಿಟಿಷ್ ಸಾಮ್ರಾಜ್ಯವನ್ನು ಗೆದ್ದ ಗಾಂಧಿ ಅಪ್ರತಿಮ ಹೋರಾಟಗಾರ. ಅವರ ಅಹಿಂಸೆ ಇಂದು ಜಗತ್ತಿಗೆ ಮಾದರಿಯಾಗಿದೆ ಎಂದು ಎಕ್ಸ್ ಪರ್ಟ್ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಅವರು ಹೇಳಿದರು.

ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಗಾಂಧಿ - ಶಾಸ್ತ್ರೀ  ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಗಾಂಧೀಜಿ ಅವರು, ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬಾಳಿ ಬದುಕಿದ ಮಹಾತ್ಮ ಎಂದರು.

ಲಾಲ್ ಬಹದ್ದೂರ್  ಶಾಸ್ತ್ರೀ  ಸಮರ್ಥ ನಾಯಕನಾಗಿ ದೇಶದ ಪ್ರಧಾನಿಯಾಗಿ ಜನಪ್ರಿಯ.  ಜೈ ಜವಾನ್-ಜೈ ಕಿಸಾನ್ ಘೋಷಣೆಯ ಮೂಲಕ ದೇಶದ ರೈತರು ಮತ್ತು  ಸೈನಿಕರಿಗೆ ಗೌರವ  ಕೊಟ್ಟವರು ಎಂದು ಅವರು ವಿವರಿಸಿದರು.

ಉಪ ಪ್ರಾಂಶುಪಾಲ(ಶೈಕ್ಷಣಿಕ ) ಗುರುದತ್ ಎನ್. ಅವರು ಮಾತನಾಡಿ, ಗಾಂಧೀಜಿಯ ಜೀವನವೇ ಒಂದು  ಪಾಠ. ಅವರು ದೇಹತ್ಯಾಗ ಮಾಡಿದ ದಿನದಿಂದಲೇ  ಅವರ ಚಿಂತನೆ-ಯೋಚನೆಗಳು ಮರುಹುಟ್ಟು  ಪಡೆಯಿತು. ಹಾಗಾಗಿ ಗಾಂಧೀಜಿ ಸಾಯುವುದಿಲ್ಲ ಎಂದವರು ವಿವರಿಸಿದರು.

ಉಪ ಪ್ರಾಂಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕಿ ನಿಖಿತಾ ಅಮೀನ್, ಕಾರ್ಯಕ್ರಮ ನಿರ್ದೇಶಕಿ ಸರಸ್ವತಿ ಬಿ.ಎನ್. ಉಪಸ್ಥಿತರಿದ್ದರು.

ಗಾಂಧಿ-ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ವಿದ್ಯಾರ್ಥಿನಿಗಳಾದ ಸಿರಿ ಎಸ್. ಉತ್ತರ್ ಕರ್  ಗಾಂಧೀಜಿ ಬಗ್ಗೆ  ಮತ್ತು   ಚರಿತಾ ಎನ್. ರಾಜ್, ಶಾಸ್ತ್ರಿ ಬಗ್ಗೆ ಮಾತನಾಡಿದರು.

ಅವನಿಕಾ ಬಿ.ಸಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article