'ಮಹಾಮಾಯಿ’ 108ನೇ ಪ್ರದರ್ಶನ: ರಂಗಭೂಮಿಯ ಹೊಸ ಆಯಾಮ ತೆರೆದ ನಾಟಕ

'ಮಹಾಮಾಯಿ’ 108ನೇ ಪ್ರದರ್ಶನ: ರಂಗಭೂಮಿಯ ಹೊಸ ಆಯಾಮ ತೆರೆದ ನಾಟಕ


ಮೂಡುಬಿದಿರೆ: ಸಾಹಿತ್ಯದ ಸಂಕೀರ್ಣತೆಯನ್ನು ರಂಗದ ಭಾಷೆಗೆ ಸಮರ್ಥವಾಗಿ ಪರಿವರ್ತಿಸಿ, ತಾಯಿ, ಅಧಿಕಾರ ಮತ್ತು ಮಾನವ ಸಂಬಂಧಗಳ ಆಳವಾದ ಒಳನೋಟಗಳನ್ನು ಪ್ರೇಕ್ಷಕರ ಮುಂದಿಡುವಲ್ಲಿ ಮಹಾಮಾಯಿ ನಾಟಕ ಸಫಲವಾಗಿದೆ.  ಇಂತಹ ಸಂಕೀರ್ಣ ಪರಿಕಲ್ಪನೆಗಳನ್ನು ರಂಗದ ಮೇಲೆ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಅಭಿನಯ  ಸ್ತುತ್ಯರ್ಹ ಎಂದು ಡಾ. ಚಂದ್ರಶೇಖರ ಕಂಬಾರರ ಪುತ್ರ ರಾಜಶೇಖರ ಕಂಬಾರ ನುಡಿದರು.


ಮೂಡುಬಿದಿರೆಯ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ, ಡಾ. ಜೀವನ್‌ರಾಮ್ ಸುಳ್ಯ ನಿರ್ದೇಶನದ ‘ಮಹಾಮಾಯಿ’ ನಾಟಕದ 108ನೇ ಪ್ರದರ್ಶನದ ಬಳಿಕ ಅವರು ಮಾತನಾಡಿದರು.

ಬೇರೆ ಬೇರೆ ನಿರ್ದೇಶಕರ ನಿರ್ದೇಶನದಲ್ಲಿ ಸುಮಾರು ಹದಿನಾಲ್ಕು ನಾಟಕಗಳನ್ನು ವೀಕ್ಷಿಸಿದ್ದೇನೆ. ಆದರೆ ‘ಮಹಾಮಾಯಿ’ಯ ಈ ಪ್ರದರ್ಶನದಲ್ಲಿ ತಾಯಿ, ಅಧಿಕಾರ, ಮಾನವ ಸಂಬಂಧಗಳು ಹಾಗೂ ಅವುಗಳ ಒಳನೋಟಗಳನ್ನು ಅತ್ಯಂತ ಸಮರ್ಥವಾಗಿ ರಂಗದ ಮೇಲೆ ಕಟ್ಟಿಕೊಟ್ಟಿರುವುದು ವಿಶೇಷವಾಗಿ ಕಂಡಿತು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾತನಾಡಿ, ‘ಮಹಾಮಾಯಿ’ಯಂತಹ ನಾಟಕವನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ವಿಶೇಷವಾಗಿ ಜನಪದೀಯ ಶೈಲಿ, ಅದರೊಳಗಿನ ಹಲವು ಸಾಂಸ್ಕೃತಿಕ ಅಂಶಗಳು, ಪಾತ್ರಗಳ ಭಾವನಾತ್ಮಕ ಸಂಘರ್ಷ ಹಾಗೂ ಕಥನದ ವೈಶಿಷ್ಟ್ಯವನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸುವುದು ದೊಡ್ಡ ಸವಾಲು. ಪ್ರತಿಯೊಂದು ಪಾತ್ರ, ದೃಶ್ಯ ಮತ್ತು ಚಲನವಲನದ ನಡುವೆ ಸಮನ್ವಯ ಸಾಧಿಸಬೇಕಾಗುತ್ತದೆ ಎಂದ ಅವರು ಡಾ. ಜೀವನ್‌ರಾಮ್ ಸುಳ್ಯರವರ ನಿರ್ದೇಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಮಹಾಮಾಯಿ’ ನೀಡಿದ ಹೊಸ ಲೋಕದ ಅನುಭವ

ಸಾಯಿರಾಧಾ ಬಿಲ್ಡರ್ಸ್ನ ಮನೋಹರ ಶೆಟ್ಟಿ ಮಾತನಾಡಿ, ಶ್ರದ್ಧೆ, ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಡಾ. ಮೋಹನ್ ಆಳ್ವ ಅವರು ರಂಗಭೂಮಿಗೆ ನೀಡುತ್ತಿರುವ ಪ್ರೋತ್ಸಾಹ ಗಮನಾರ್ಹವಾಗಿದೆ.

ಅಭಿನಯ, ರಂಗಸಜ್ಜಿಕೆ, ಬೆಳಕು, ಸಂಗೀತ ಹಾಗೂ ಜನಪದೀಯ ಅಂಶಗಳ ಬಳಕೆ ಪ್ರೇಕ್ಷಕರನ್ನು ನಾಟಕದೊಳಗೆ ಸೆಳೆಯುತ್ತದೆ, ಎಂದರು. ಆಳ್ವಾಸ್‌ನಲ್ಲಿ ಚಲನಚಿತ್ರ ಅಕಾಡೆಮಿಯನ್ನು ಆರಂಭಿಸಿ, ಅಭಿನಯ, ನಿರ್ದೇಶನ, ತಾಂತ್ರಿಕ ವಿಭಾಗಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವ ಸಾಧ್ಯತೆಗಳ ಕುರಿತು ಚಿಂತಿಸಬಹುದು. ರಂಗಭೂಮಿ ಮತ್ತು ಚಲನಚಿತ್ರ ಎರಡೂ ಕ್ಷೇತ್ರಗಳಿಗೆ ಪ್ರತಿಭೆಗಳನ್ನು ಬೆಳೆಸುವ ವಾತಾವರಣವನ್ನು ರೂಪಿಸುವ ಅಗತ್ಯವಿದೆ ಎಂದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ನಾಟಕದ ನಿರ್ದೇಶಕ ಡಾ ಜೀವನರಾಮ್ ಸುಳ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article